Site icon Vistara News

SBI interest rate | ಸಣ್ಣ ಉಳಿತಾಯಗಾರರಿಗೆ ಸಿಹಿ ಸುದ್ದಿ, ಎಸ್‌ಬಿಐ ಎಫ್‌ಡಿ ಠೇವಣಿ ದರ 7.25% ತನಕ ಏರಿಕೆ

SBI jobs

ನವ ದೆಹಲಿ: ಸಾರ್ವಜನಿಕ ವಲಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ತನ್ನ ನಿಗದಿತ ಅವಧಿತ ಠೇವಣಿಗಳ (Fixed deposits) ಬಡ್ಡಿ ದರದಲ್ಲಿ 0.65% ತನಕ ಏರಿಸಿದ್ದು, ಗರಿಷ್ಠ 7.25%ಕ್ಕೆ ವೃದ್ಧಿಸಿದೆ.

ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ ನಾನಾ ಅವಧಿಗಳ ನಿಶ್ಚಿತ ಠೇವಣಿ ( ಫಿಕ್ಸೆಡ್‌ ಡೆಪಾಸಿಟ್‌) ಬಡ್ಡಿ ದರಗಳಲ್ಲಿ 0.25%ರಿಂದ 0.65% ತನಕ ಹೆಚ್ಚಳವಾಗಿದೆ.

2 ಕೋಟಿ ರೂ. ತನಕದ ಠೇವಣಿಗಳ ಬಡ್ಡಿ ದರದಲ್ಲಿ ಹೆಚ್ಚಳ ಉಂಟಾಗಿದೆ. 2022 ಡಿಸೆಂಬರ್‌ 13ರಿಂದ ಅನ್ವಯವಾಗುತ್ತಿದೆ. 2022ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಎಸ್‌ಬಿಐ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರದಲ್ಲಿ 0.80% ತನಕ ಏರಿಸಿತ್ತು.

ಬಡ್ಡಿ ದರ ಏರಿಕೆ ಎಷ್ಟು?

211ರಿಂದ ಒಂದು ವರ್ಷ ಅವಧಿಯೊಳಗಿನ ಠೇವಣಿಗೆ 5.75% ಬಡ್ಡಿ ಸಿಗಲಿದೆ. ಈ ಹಿಂದೆ 5.50% ಬಡ್ಡಿ ದರವಿತ್ತು.

1-2 ವರ್ಷ ಅವಧಿಯ ಠೇವಣಿಗೆ ಬಡ್ಡಿ ದರವನ್ನು 6.10%ರಿಂದ 6.75%ಕ್ಕೆ ಏರಿಸಲಾಗಿದೆ. ಅಂದರೆ 0.65% ಹೆಚ್ಚಳವಾಗಿದೆ.

2-3 ವರ್ಷ ಅವಧಿಯ ಠೇವಣಿಗೆ ಬಡ್ಡಿ ದರವನ್ನು 6.25%ರಿಂದ 6.75%ಕ್ಕೆ ವೃದ್ಧಿಸಲಾಗಿದೆ. 3-5 ವರ್ಷ ಅವಧಿಯ ಠೇವಣಿಗೆ ಬಡ್ಡಿ ದರವನ್ನು 6.10%ರಿಂದ 6.25%ಕ್ಕೆ ಏರಿಸಲಾಗಿದೆ. 5-10 ವರ್ಷ ಅವಧಿಯ ನಿಶ್ಚಿತ ಠೇವಣಿಗೆ ಬಡ್ಡಿ ದರದಲ್ಲಿ 6.10%ರಿಂದ 6.25%ಕ್ಕೆ ಹೆಚ್ಚಳವಾಗಿದೆ.

ಹಿರಿಯ ನಾಗರಿಕರಿಗೆ 7.25% ಬಡ್ಡಿ ದರ

ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಯಲ್ಲಿ 7 ದಿನಗಳಿಂದ 10 ವರ್ಷಗಳ ಅವಧಿಗೆ ಬಡ್ಡಿ ದರ 3.5%ರಿಂದ 7.25% ತನಕ ಏರಿಕೆಯಾಗಿದೆ.

Exit mobile version