Site icon Vistara News

SBI Q4 Results: 9,113 ಕೋಟಿ ರೂ. ನಿವ್ವಳ ಲಾಭ, 7.10 ರೂ. ಡಿವಿಡೆಂಡ್‌ ಘೋಷಣೆ

ಹೊಸದಿಲ್ಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಳೆದ ಜನವರಿ- ಮಾರ್ಚ್‌ನಲ್ಲಿ 9,113 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.41ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6,450 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಹೀಗಿದ್ದರೂ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಷ್ಟು ಲಾಭ ಬಂದಿಲ್ಲ. ನಿರೀಕ್ಷೆಗಳ ಪ್ರಕಾರ 10 ಸಾವಿರ ಕೋಟಿ ರೂ. ನಿವ್ವಳ ಲಾಭ ಸಿಗಬೇಕಿತ್ತು.

ಎಸ್‌ಬಿಐ ಪ್ರತಿ ಷೇರಿಗೆ 7.10ರೂ.ಗಳ ಡಿವಿಡೆಂಡ್‌ ನೀಡುವುದಾಗಿ ಘೋಷಿಸಿದೆ.
ಎಸ್‌ಬಿಐ ಬಡ್ಡಿ ಆದಾಯ 31,198 ಕೋಟಿ ರೂ.ಗಳಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 15.26 ಏರಿಕೆಯಾಗಿದೆ. (27,067 ಕೋಟಿ ರೂ.) ವಸೂಲಾಗದಿರುವ ಸಾಲದ ಬಾಬ್ತು ಮೀಸಲಿಡುವ ಹಣದ ಅಗತ್ಯವೂ ಎಸ್‌ಬಿಐಗೆ ಈಗ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,914 ಕೋಟಿ ರೂ. ತೆಗೆದಿಟ್ಟಿದ್ದರೆ, ಈ ಸಲ 3,262 ಕೋಟಿ ರೂ.ಗೆ ತಗ್ಗಿದೆ.

ಒಟ್ಟಾರೆ ಎನ್‌ಪಿಎ ಶೇ.3.97ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಶೇ.4.50 ಇತ್ತು.

Exit mobile version