Site icon Vistara News

SBI Research| ಕರ್ನಾಟಕದಲ್ಲಿ ಹತ್ತಿ ಬೆಳೆದ ರೈತರ ಆದಾಯ ಡಬಲ್‌

cotton

ನವದೆಹಲಿ: ದೇಶದ ಕೆಲವು ರಾಜ್ಯಗಳಲ್ಲಿ ಕಳೆದ ಐದು ವರ್ಷಗಳಲ್ಲಿ ನಿರ್ದಿಷ್ಟ ಬೆಳೆಗಳನ್ನು ಬೆಳೆದ ರೈತರ ಆದಾಯ ಬಹುತೇಕ ಇಮ್ಮಡಿಯಾಗಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.

ಕರ್ನಾಟಕದಲ್ಲಿ ಹತ್ತಿ ಬೆಳೆದ ರೈತರು ಹಾಗೂ ಮಹಾರಾಷ್ಟ್ರದಲ್ಲಿ ಸೋಯಾಬೀನ್‌ ಬೆಳೆದ ರೈತರ ಆದಾಯ ಇಮ್ಮಡಿಯಾಗಿದೆ ಎಂದು ವರದಿ ತಿಳಿಸಿದೆ.

ಇತರ ಬೆಳೆಗಳಲ್ಲಿ ಆದಾಯ ೧.೩-೧.೭ ಪಟ್ಟು ವೃದ್ಧಿಸಿದೆ. ರಾಜಸ್ಥಾನದಲ್ಲಿ ಗೋಧಿ ಬೆಳೆದ ರೈತರ ಆದಾಯ ೧.೩ ಪಟ್ಟು ವೃದ್ಧಿಸಿದೆ. ಗುಜರಾತ್‌ನಲ್ಲಿ ನೆಲಗಡಲೆ ಬೆಳೆದವರ ಆದಾಯ ೧.೫ ಪಟ್ಟು ಹೆಚ್ಚಳವಾಗಿದೆ.

ವಾಣಿಜ್ಯ ಬೆಳೆಗಳಲ್ಲಿ ಆದಾಯ ಹೆಚ್ಚು: ವಾಣಿಜ್ಯ ಬೆಳೆಗಳನ್ನು ಬೆಳೆದವರಿಗೆ ಆದಾಯ ಇತರ ಆಹಾರ ಬೆಳೆಗಳನ್ನು ಬೆಳೆದವರಿಗಿಂತ ಹೆಚ್ಚಳವಾಗಿದೆ. ೨೦೧೪ರಿಂದೀಚೆಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ೧.೫-೨.೩ ಪಟ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಕೇಂದ್ರ ಸರ್ಕಾರ ರೈತರ ಆದಾಯವನ್ನು ೨೦೨೨-೨೩ರೊಳಗೆ ಇಮ್ಮಡಿ ಮಾಡಬೇಕು ಎಂಬ ಗುರಿ ಹಾಕಿಕೊಂಡಿತ್ತು. ಇದಕ್ಕಾಗಿ ಎಂಎಸ್‌ಪಿ ಹೆಚ್ಚಳ, ಬೆಳೆ ವಿಮೆ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಆದ್ಯತೆ, ಮಣ್ಣಿನ ಗುಣಮಟ್ಟ ಪರೀಕ್ಷೆ, ಇ-ನ್ಯಾಮ್‌, ಫುಡ್‌ ಪಾರ್ಕ್ಸ್‌ ಇತ್ಯಾದಿ ಯೋಜನೆ ಹಮ್ಮಿಕೊಂಡಿತ್ತು. ಈ ಪೈಕಿ ಎಂಎಸ್‌ಪಿ ರೈತರ ಆದಾಯ ವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ವರದಿ ತಿಳಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆಯನ್ನು ಸುಧಾರಿಸಲು ಸ್ವಸಹಾಯ ಗುಂಪುಗಳು ನಿರ್ಣಾಯಕವಾಗಿವೆ. ರೈತರ ಉತ್ಪಾದಕ ಸಂಸ್ಥೆಗಳೂ ಸಹಕಾರಿಯಾಗಿವೆ ಎಂದು ವರದಿ ತಿಳಿಸಿದೆ.

Exit mobile version