Site icon Vistara News

SBI Results : ಎಸ್‌ಬಿಐಗೆ ಇತಿಹಾಸದಲ್ಲೇ ಅತ್ಯಧಿಕ ದಾಖಲೆಯ, 14,205 ಕೋಟಿ ರೂ. ತ್ರೈಮಾಸಿಕ ನಿವ್ವಳ ಲಾಭ

SBI Results: Highest ever record for SBI, Rs 14,205 crore. Quarterly Net Profit

ನವ ದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಹೆಗ್ಗಳಿಕೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI Results) 2022 ರ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ 14,205 ಕೋಟಿ ರೂ. ನಿವ್ವಳ ಲಾಭ (Net profit) ಗಳಿಸಿದೆ. ಇದು ಎಸ್‌ಬಿಐನ ಇತಿಹಾಸದಲ್ಲಿಯೇ ಗರಿಷ್ಠ ತ್ರೈಮಾಸಿಕ ನಿವ್ವಳ ಲಾಭವಾಗಿದೆ. ಮಾರುಕಟ್ಟೆಯ ನಿರೀಕ್ಷೆಯನ್ನೂ ಮೀರಿ ಎಸ್‌ಬಿಐ 64% ಏರಿಕೆಯ ಲಾಭ ದಾಖಲಿಸಿರುವುದು ವಿಶೇಷ.

ಎಸ್‌ಬಿಐನ ನಿವ್ವಳ ಬಡ್ಡಿ ಆದಾಯ 24% ಏರಿದ್ದು, 38,068 ಕೋಟಿ ರೂ.ಗೆ ಜಿಗಿದಿದೆ. ಇದು ನಿರೀಕ್ಷೆಯ ರೀತಿಯಲ್ಲಿಯೇ ಲಭಿಸಿದೆ. ಬ್ಯಾಂಕ್‌ ವಸೂಲಾಗದ ಸಾಲಗಳ ನಿರ್ವಹಣೆಗೆ 5,761 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ತೆಗೆದಿಟ್ಟಿತ್ತು. (provision)

ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ಎಸ್‌ಬಿಐನ ವಸೂಲಾಗದ ಸಾಲದ ಪ್ರಮಾಣ 3.14%ಕ್ಕೆ ಇಳಿಕೆಯಾಗಿತ್ತು. ಇದಕ್ಕೂ ಹಿಂದಿನ ವರ್ಷ 4.50% ಇತ್ತು. ಸಾಲ ವಿತರಣೆ 17.60% ಪ್ರಗತಿ ದಾಖಲಿಸಿತ್ತು. ಸಣ್ಣ ಉದ್ದಿಮೆ ಮತ್ತು ಕೃಷಿಗೆ ಸಾಲ ವಿತರಣೆಯ ಪ್ರಮಾಣ 14% ಏರಿತ್ತು.

Exit mobile version