Site icon Vistara News

SBI Sarvottam Scheme : ಎಸ್‌ಬಿಐ ಯೋಜನೆಯಲ್ಲಿ ಪಿಪಿಎಫ್‌, ಎನ್‌ಎಸ್‌ಸಿ, ಕೆವಿಪಿ, ಅಂಚೆ ಎಫ್‌ಡಿಗಿಂತ ಹೆಚ್ಚು ಬಡ್ಡಿ

SBI

sbi

ನೀವು ಯಾವುದಾದರೂ ಎಫ್‌ಡಿ ಯೋಜನೆಯಲ್ಲಿ 15 ಲಕ್ಷ ರೂ. ಅಥವಾ ಹೆಚ್ಚಿನ ಮೊತ್ತವನ್ನು ಠೇವಣಿ ಇಡಬೇಕು ಎಂದು ಆಲೋಚಿಸಿದ್ದೀರಾ? ಹಾಗಾದರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಯೋಜನೆಯು ( SBI Sarvottam term deposit) ಪಿಪಿಎಫ್‌, (PPF) ಎನ್‌ಎಸ್‌ಸಿ ಮತ್ತು ಇತರ ಹಲವಾರು ಅಂಚೆ ಇಲಾಖೆಯ ಯೋಜನೆಗಿಂತಲೂ ಹೆಚ್ಚಿನ ಬಡ್ಡಿ ದರವನ್ನು ಎಸ್‌ಬಿಐನ ಠೇವಣಿ ಉಳಿತಾಯ ಯೋಜನೆ ನೀಡುತ್ತದೆ. ಹಾಗಾದರೆ ಯಾವು ಆ ಯೋಜನೆ ಎನ್ನುತ್ತೀರಾ? ಇಲ್ಲಿದೆ ವಿವರ.

ಎಸ್‌ಬಿಐನ ಸರ್ವೋತ್ತಮ್‌ ಟರ್ಮ್‌ ಡೆಪಾಸಿಟ್‌ ಸ್ಕೀಮ್‌ ( SBI Sarvottam term deposit) ಅಡಿಯಲ್ಲಿ ಸಾರ್ವಜನಿಕರು 7.4% ಬಡ್ಡಿ ದರವನ್ನು ಪಡೆಯಬಹುದು. 15 ಲಕ್ಷ ರೂ.ಗಿಂತ ಹೆಚ್ಚು ಹಾಗೂ 2 ಕೋಟಿ ರೂ.ಗಿಂತ ಕಡಿಮೆ ಹಣವನ್ನು ಇಲ್ಲಿ ಹೂಡಿಕೆ ಮಾಡಬಹುದು. ಹಿರಿಯ ನಾಗರಿಕರು 1 ವರ್ಷದ ಠೇವಣಿಗೆ 7.6% ಬಡ್ಡಿ ಪಡೆಯಬಹುದು ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 2023ರ ಫೆಬ್ರವರಿ 17ರಿಂದ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ. 2 ಕೋಟಿ ರೂ.ಗಳಿಂದ 5 ಕೋಟಿ ರೂ. ತನಕದ ಸಗಟು ಠೇವಣಿಗಳಿಗೆ 1 ವರ್ಷ ಅವಧಿಗೆ 7.55% ಮತ್ತು 2 ವರ್ಷ ಅವಧಿಗೆ ಹಿರಿಯ ನಾಗರಿಕರಿಗೆ 7.4% ಬಡ್ಡಿ ದರ ಸಿಗಲಿದೆ.

ಎಸ್‌ಬಿಐ ಸರ್ವೋತ್ತಮ್‌ ಟರ್ಮ್‌ ಡೆಪಾಸಿಟ್‌ ಯೋಜನೆಯ ಬಡ್ಡಿ ದರಕ್ಕೆ ಹೋಲಿಸಿದರೆ ಈಗಿನ ನಾನಾ ಸಣ್ಣ ಉಳಿತಾಯ ಯೋಜನೆ (Fixed deposite) ಮತ್ತು ಅಂಚೆ ಇಲಾಖೆ ಠೇವಣಿ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಕಡಿಮೆ. (SBI interest rate on Fixed deposit of over 15 lakh Rs )

ಪಿಪಿಎಫ್‌ ಬಡ್ಡಿ ದರ: ಸಾರ್ವಜನಿಕ ಭವಿಷ್ಯನಿಧಿ (PPF Interest rate) ಯೋಜನೆಯಲ್ಲಿ 7.1% ಬಡ್ಡಿ ದರ ಇದೆ. ಆದರೆ ವರ್ಷಕ್ಕೆ 1.5 ಲಕ್ಷ ರೂ. ಮಾತ್ರ ಹೂಡಿಕೆ ಮಾಡಬಹುದು. ಪಿಪಿಎಫ್‌ ಬಡ್ಡಿ ದರವು ಎಸ್‌ಬಿಐ ಸರ್ವೋತ್ತಮ್‌ ಡೆಪಾಸಿಟ್‌ ಯೋಜನೆಯ ದರಕ್ಕಿಂತ ಕಡಿಮೆಯಾದರೂ, ತೆರಿಗೆ ಲಾಭ ಪರಿಗಣಿಸಿದರೆ (sarvottam domestic retail term deposits) ಪಿಪಿಎಫ್‌ ಹೆಚ್ಚು ಆದಾಯ ನೀಡಬಹುದು.

ಅಂಚೆ ಇಲಾಖೆ ಬಡ್ಡಿ ದರ: ಅಂಚೆ ಇಲಾಖೆಯಲ್ಲಿ (Postal saving schme) 5 ವರ್ಷಗಳ ಠೇವಣಿಗೆ 7% ಬಡ್ಡಿಯನ್ನು ನೀವು ಪಡೆಯಬಹುದು. 1, 2 ವರ್ಷ ಅವಧಿಯ ಠೇವಣಿಗೆ ಅನುಕ್ರಮವಾಗಿ 6.6% ಮತ್ತು 6.8% ಬಡ್ಡಿ ಸಿಗಲಿದೆ. ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯಲ್ಲಿ 7.1% ಬಡ್ಡಿ ದರ ಸಿಗಬಹುದು.

ಎನ್‌ಎಸ್‌ಸಿ ಬಡ್ಡಿ ದರ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಅಡಿಯಲ್ಲಿ 7% ಬಡ್ಡಿ ಸಿಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲೂ ತೆರಿಗೆ ವಿನಾಯಿತಿ ಅನುಕೂಲ ಪಡೆಯಬಹುದು.

ಕೆವಿಪಿ ಬಡ್ಡಿ ದರ: ಕಿಸಾನ್‌ ವಿಕಾಸ್‌ ಪತ್ರದ ಅಡಿಯಲ್ಲಿ (Kisan Vikas Patra) ಠೇವಣಿ ಬಡ್ಡಿ ದರ 7.2% ಆಗಿದೆ. ಈ ಯೋಜನೆ ಅಡಿಯಲ್ಲಿ 120 ತಿಂಗಳುಗಳಲ್ಲಿ ನಿಮ್ಮ ಹಣ ಇಮ್ಮಡಿಯಾಗುತ್ತದೆ.

Exit mobile version