ಮುಂಬಯಿ: ಭಾರತೀಯ ಬ್ಯಾಂಕಿಂಗ್ ನಲ್ಲಿ ಅಗ್ರಜ ಸ್ಥಾನದಲ್ಲಿರುವ, ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್‌ಬಿಐ) ಇಂದು ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಮುಟ್ಟಿದೆ. ಬ್ಯಾಂಕಿನ ಷೇರು ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂ.ಗಳನ್ನು ದಾಟಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ 5 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ಮೊಟ್ಟ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಎಸ್‌ಬಿಐ ತನ್ನ ಮುಡಿಗೇರಿಸಿಕೊಂಡಿದೆ. ಮತ್ತು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಐದು ಲಕ್ಷ ಕೋಟಿ ಮೌಲ್ಯ ಹೊಂದಿದ ಏಳನೇ ಕಂಪನಿಯಾಗಿ ಹೊರಹೊಮ್ಮಿದೆ.
ಎಸ್‌ಬಿಐ ಷೇರು ಮೌಲ್ಯ 574.7 ರೂ. ದಾಟಿದಾಗ ಐದು ಲಕ್ಷ ಕೋಟಿ ಮೈಲುಗಲ್ಲನ್ನು ದಾಟಿತು. ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ 5 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಮೊದಲ ಸಲ ದಾಖಲಿಸಿತ್ತು. ಕಳೆದ ಮೂರು ತಿಂಗಳುಗಳಲ್ಲಿ ಎಸ್‌ಬಿಐ ಷೇರು ದರದಲ್ಲಿ 26% ಹೆಚ್ಚಳವಾಗಿತ್ತು.
ಬ್ಯಾಲೆನ್ಸ್‌ಶೀಟ್ ಗಾತ್ರದ ವಿಚಾರದಲ್ಲಿ ಎಸ್‌ಬಿಐ, 54 ಲಕ್ಷ ಕೋಟಿ ರೂ.ಗಳನ್ನು ಒಳಗೊಂಡಿದ್ದು, ಅತಿ ದೊಡ್ಡ ಬ್ಯಾಂಕ್ ಎನ್ನಿಸಿದೆ.