ನವದೆಹಲಿ: ಭಾರತೀಯರು ಕಳೆದ 2021ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಠೇವಣಿ ಇಟ್ಟಿರುವ ಹಣದ ಮೊತ್ತ 21 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ.
2021ರಲ್ಲಿ ಭಾರತೀಯರು 3.83 ಶತಕೋಟಿ ಸಿಎಚ್‌ಎಫ್ ( ಸ್ವಿಸ್ ಫ್ರಾಂಕ್) ಹಣವನ್ನು ಠೇವಣಿ ಇಟ್ಟಿದ್ದಾರೆ. ರೂಪಾಯಿ ಲೆಕ್ಕದಲ್ಲಿ 30,000 ಕೋಟಿ ರೂ.ಗಳಾಗುತ್ತದೆ.
2021ರಲ್ಲಿ ಸೆಕ್ಯುರಿಟೀಸ್ ಹಾಗೂ ಅದೇ ರೀತಿಯ ಹಣಕಾಸು ಸಾಧನಗಳಲ್ಲಿ ಭಾರತೀಯರು ಹಣ ಹೂಡಿಕೆ ಮಾಡಿದ್ದಾರೆ. ಈ ಬಗ್ಗೆ ಸ್ವಿಜರ್ಲೆಂಡ್‌ನ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ. 2020ರ ಅಂತ್ಯಕ್ಕೆ ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ಹಣ 20,700 ಕೋಟಿ ರೂ.ಗಳಾಗಿತ್ತು. ಸತತ ಎರಡು ವರ್ಷಗಳಿಂದ ಡಿಪಾಸಿಟ್ ಹೆಚ್ಚಳವಾಗಿದೆ.
ಸ್ವಿಸ್ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 4,800 ಕೋಟಿ ರೂ.ಗಳನ್ನು ಭಾರತೀಯರು ಇಟ್ಟಿದ್ದಾರೆ. 2019ರಲ್ಲಿ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಗಣನೀಯ ಇಳಿಕೆಯಾಗಿತ್ತು.
ಸ್ವಿಸ್ ಅಧಿಕಾರಿಗಳು ಭಾರತದ ಜತೆಗೆ ನಿಯಮಿತವಾಗಿ ಭಾರತೀಯರ ಠೇವಣಿ ಕುರಿತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಸ್ವಿಸ್ ಅಧಿಕಾರಿಗಳ ಪ್ರಕಾರ, ಅಲ್ಲಿನ ಬ್ಯಾಂಕ್‌ಗಳಲ್ಲಿ ಭಾರತೀಯರು ಇಡುತ್ತಿರುವ ಎಲ್ಲ ಹಣವೂ ಕಪ್ಪುಹಣ ಆಗಿರುವ ಸಾಧ್ಯತೆ ಇಲ್ಲ. ಕಪ್ಪುಹಣದ ವಿರುದ್ಧ ಭಾರತದ ಕಾರ್ಯಾಚರಣೆಗೆ ಸ್ವಿಸ್ ಸರಕಾರ ಸಕಲ ಬೆಂಬಲ ನೀಡಲಿದೆ ಎಂದೂ ತಿಳಿಸಿದ್ದಾರೆ.