ನವದೆಹಲಿ: ಮಧ್ಯಂತರ ಬಜೆಟ್ (Budget 2024) ಮಂಡನೆಯಾದ ಮಾರನೇ ದಿನ ಭಾರತೀಯ ಷೇರು ಪೇಟೆಯ (Indian Stock Market) ಸಕಾರಾತ್ಮಕ ಬೆಳವಣಿಗೆ ತೋರಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ (Sensex) 440.33 ಪಾಯಿಂಟ್‌ಗಳನ್ನು ಜಿಗಿದು 72,085.63ಕ್ಕೆ ಸ್ಥಿರವಾಯಿತು, ಆದರೆ ಎನ್‌ಎಸ್‌ಇ ನಿಫ್ಟಿ (Nifty) 156.35 ಪಾಯಿಂಟ್‌ಗಳನ್ನು ಏರಿ 280,85ಕ್ಕೆ ತಲುಪಿತು. ಇದೇ ವೇಳೆ, ಡಾಲರ್ ಎದುರು ಭಾರತೀಯ ರೂಪಾಯಿ (Rupee) ಕೂಡ 7 ಪೈಸೆ ಏರಿಕೆಯನ್ನು ದಾಖಲಿಸಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ 21 ಷೇರುಗಳು ಉತ್ತಮ ಫಲಿತಾಂಶವನ್ನು ತಂದಿವೆ. ಪವರ್ ಗ್ರಿಡ್, ಎನ್‌ಟಿಪಿಸಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಟಾಟಾ ಸ್ಟೀಲ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ.4.10 ರಷ್ಟು ಏರಿಕೆ ಕಂಡಿವೆ. ಮತ್ತೊಂದೆಡೆ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ ಮತ್ತು ಲಾರ್ಸೆನ್ ಆಂಡ್ ಟೂಬ್ರೊ ಶೇ.1.42ಕ್ಕೆ ಕುಸಿದಿವೆ.
ಮಧ್ಯಾಹ್ನದ ವಹಿವಾಟಿನಲ್ಲಿ ನಿಫ್ಟಿ ಕೂಡ 429.35 ಜಿಗಿದು 22,126.80ಗೆ ಏರುವ ಮೂಲಕ ಸಾರ್ವತ್ರಿಕ ದಾಖಲೆ ಬರೆಯಿತು. ಅದೇ ವೇಳೆ, ಸೆನ್ಸೆಕ್ಸ್ ಕೂಡ 1,444.1 ಅಂಕ ಜಿಗಿದು 73,089.40 ಪಾಯಿಂಟ್‌ಗಳಿಗೆ ತಲುಪಿತು.
ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 0.42 ಶೇಕಡಾ ಏರಿಕೆಯಾಗಿ 79.03 ಡಾಲರ್‌ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 1,879.58 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾಡಿದ್ದಾರೆ ಎಂದು ವಿನಿಮಯ ಮಾಹಿತಿಯು ತಿಳಿಸಿದೆ.
ಗುರುವಾರ ಬಜೆಟ್ ದಿನದಂದು ಸೆನ್ಸೆಕ್ಸ್ 106.81 ಪಾಯಿಂಟ್‌ಗಳು ಅಥವಾ ಶೇಕಡಾ 0.15 ರಷ್ಟು ಕುಸಿದು 71,645.30 ಕ್ಕೆ ಸ್ಥಿರವಾಗಿತ್ತು. ನಿಫ್ಟಿ 28.25 ಪಾಯಿಂಟ್ ಅಥವಾ 0.13 ರಷ್ಟು ಕುಸಿದು 21,697.45 ಕ್ಕೆ ತಲುಪಿತ್ತು. ಬಜೆಟ್‌ನಲ್ಲಿ ಹೆಚ್ಚಿನ ಘೋಷಣೆಗಳು ಇಲ್ಲದ್ದರಿಂದ ರೈಲ್ವೆ ಷೇರುಗಳು ಕೂಡ ಭಾರೀ ಕುಸಿತವನ್ನ ದಾಖಲಿಸಿದ್ದವು.
ಈ ಸುದ್ದಿಯನ್ನೂ ಓದಿ: Stock Market: ಒಂದು ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಸೆನ್ಸೆಕ್ಸ್! 8 ಲಕ್ಷ ಕೋಟಿ ರೂ. ನಷ್ಟ?