Site icon Vistara News

Stock Market Crash | ಸೆನ್ಸೆಕ್ಸ್‌ 577 ಅಂಕ ಪತನ, ನಿಫ್ಟಿ 17,827ಕ್ಕೆ ಇಳಿಕೆ

stock trader

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ ಮಧ್ಯಾಹ್ನದ ವೇಳೆಗೆ 577 ಅಂಕ ಕುಸಿದು 59,761ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. (Stock Market Crash) ನಿಫ್ಟಿ 171 ಅಂಕ ನಷ್ಟದಲ್ಲಿ 17,816ಕ್ಕೆ ಇಳಿದಿತ್ತು.

ಎಫ್‌ಎಂಸಿಜಿ ಹೊರತುಪಡಿಸಿ ಉಳಿದೆಲ್ಲ ವಲಯದ ಷೇರುಗಳು ನಷ್ಟದಲ್ಲಿತ್ತು. ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸುವ ಸಾಧ್ಯತೆ ಉಂಟಾಗಿರುವುದು ಷೇರು ಹೂಡಿಕೆದಾರರಲ್ಲಿ ಕಳವಳ ಮೂಡಿಸಿತು.

ಐಟಿ ಕಂಪನಿಗಳು ಮೂರನೇ ತ್ರೈಮಾಸಿಕದ ಆದಾಯದ ಬಗ್ಗೆ ಫಲಿತಾಂಶ ಪ್ರಕಟಿಸುವುದಕ್ಕೆ ಮುನ್ನ ಐಟಿ ಷೇರುಗಳ ಕುಸಿದವು. ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಖಾಸಗಿ ವಲಯದ ಕಂಪನಿಗಳಲ್ಲಿ ಉದ್ಯೋಗಿಗಳ ನೇಮಕಾತಿಯಲ್ಲಿ ಹೆಚ್ಚಳ ಉಂಟಾಗಿದೆ. ಇದು ಆರ್ಥಿಕತೆಯ ಚೇತರಿಕೆಯನ್ನು ಬಿಂಬಿಸಿದೆ. ಹೀಗಾಗಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಏಷ್ಯಾದ ಮಾರುಕಟ್ಟೆಯಲ್ಲಿ ಷೇರು ಮಾರುಕಟ್ಟೆಗಳು ಕುಸಿಯಿತು. ಕಚ್ಚಾ ತೈಲ ದರ ಏರಿಕೆ ಕೂಡ ನಕಾರಾತ್ಮಕ ಪ್ರಭಾವ ಬೀರಿತು.

2022ರಲ್ಲಿ ಐಟಿ ಷೇರುಗಳ ಮೌಲ್ಯದಲ್ಲಿ 22% ಇಳಿಕೆ ದಾಖಲಾಗಿತ್ತು. 2023ರಲ್ಲೂ ಐಟಿ ಷೇರುಗಳು ಹೂಡಿಕೆದಾರರನ್ನು ನಿರುತ್ಸಾಹಗೊಳಿಸುವ ಸಾಧ್ಯತೆ ಇದೆ.

Exit mobile version