ಮುಂಬಯಿ: ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆಯ ಬೆನ್ನಲ್ಲೇ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ( Sensex crash) ಗುರುವಾರ 879 ಅಂಕ ಪತನವಾಗಿದೆ.
ಸೆನ್ಸೆಕ್ಸ್ 61,799ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 245 ಅಂಕ ಕಳೆದುಕೊಂಡು 18,414ಕ್ಕೆ ಸ್ಥಿರವಾಯಿತು. ಟೆಕ್ ಮಹೀಂದ್ರಾ, ಟೈಟನ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ಐಟಿಸಿ ಷೇರು ದರ 2-4% ತನಕ ಇಳಿಯಿತು. ನಿಫ್ಟಿ ಐಟಿ ಇಂಡೆಕ್ಸ್ 2.14% ಇಳಿಯಿತು.
ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಟ್ರೆಂಡ್ ಮುಂದುವರಿಯುವ ಸಾಧ್ಯತೆ ಇದೆ ಎಂಬ ಸುಳಿವನ್ನು ಫೆಡರಲ್ ರಿಸರ್ವ್ ನೀಡಿದ್ದು, ಜಾಗತಿಕ ಷೇರು ಪೇಟೆ ತತ್ತರಿಸಿತು. ಹೀಗಿದ್ದರೂ, ಭಾರತ ಮತ್ತು ಅಮೆರಿಕದ ಮಾರುಕಟ್ಟೆಗೆ ದೀರ್ಘಕಾಲೀನ ದೃಷ್ಟಿಯಿಂದ ಆತಂಕಕ್ಕೆ ಕಾರಣವಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಏಷ್ಯಾದ ಷೇರು ಮಾರುಕಟ್ಟೆಗಳು ಗುರುವಾರ ಸೂಚ್ಯಂಕಗಳ ಕುಸಿತಕ್ಕೆ ಸಾಕ್ಷಿಯಾಯಿತು.