Site icon Vistara News

Sensex crash | ಸೆನ್ಸೆಕ್ಸ್‌ ಕುಸಿತದಿಂದ ಹೂಡಿಕೆದಾರರಿಗೆ ಶುಕ್ರವಾರ ಒಂದೇ ದಿನ 5.5 ಲಕ್ಷ ಕೋಟಿ ರೂ. ನಷ್ಟ

sensex

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ ಕುಸಿತಕ್ಕೀಡಾದ ಪರಿಣಾಮ ಶುಕ್ರವಾರ ಒಂದೇ ದಿನ 5.5 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿತು. ಸೆನ್ಸೆಕ್ಸ್‌ (Sensex crash) 980 ಅಂಕ ಕಳೆದುಕೊಂಡು 59,845ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 320 ಅಂಕ ಕಳೆದುಕೊಂಡು 17,806ಕ್ಕೆ ಸ್ಥಿರವಾಯಿತು.

ಬಿಎಸ್‌ಇ ಮಾರುಕಟ್ಟೆ ಬಂಡವಾಳ 280.55 ಲಕ್ಷ ಕೋಟಿ ರೂ.ಗಳಿಂದ 275.01 ಲಕ್ಷ ಕೋಟಿ ರೂ.ಗೆ ಇಳಿಕೆಯಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 928 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.

ಯಾವ ಷೇರುಗಳಿಗೆ ನಷ್ಟ? ಟಾಟಾ ಸ್ಟೀಲ್‌ ಷೇರು ದರ 5% ಇಳಿಯಿತು. ಟಾಟಾ ಮೋಟಾರ್ಸ್‌, ಎಸ್‌ಬಿಐ, ಬಜಾಜ್‌ ಫಿನ್‌ ಸರ್ವ್‌, ವಿಪ್ರೊ, ಇಂಡಸ್‌ಇಂಡ್‌ ಬ್ಯಾಂಕ್‌, ರಿಲಯನ್ಸ್‌, ಎಲ್&ಟಿ ಷೇರು ದರ 2-5% ಕುಸಿಯಿತು.

ಇದನ್ನೂ ಓದಿ: Sensex crash | ಕಳೆದ 4 ದಿನಗಳಲ್ಲಿ ಸೆನ್ಸೆಕ್ಸ್‌ 1,600 ಅಂಕ ಪತನ, ಕಾರಣವೇನು?

Exit mobile version