Site icon Vistara News

Sensex crash | ಸೆನ್ಸೆಕ್ಸ್‌ 635 ಅಂಕ ಕುಸಿತ, ಭಾರಿ ಪತನಕ್ಕೆ ಕಾರಣವೇನು?

stock trader

ಮುಂಬಯಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸಂಭವಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ (Sensex crash) ಬುಧವಾರ ಸಂಜೆ ೬೩೫ ಅಂಕ ಕುಸಿಯಿತು.

ಸೆನ್ಸೆಕ್ಸ್‌ ದಿನದ ಮುಕ್ತಾಯಕ್ಕೆ 61,067ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 186 ಅಂಕ ಕಳೆದುಕೊಂಡು 18,199ಕ್ಕೆ ಸ್ಥಿರವಾಯಿತು.

ಸೆನ್ಸೆಕ್ಸ್‌ ಭಾರಿ ಕುಸಿತಕ್ಕೆ ಕಾರಣವೇನು?

ಮೊದಲನೆಯದಾಗಿ, ಚೀನಾ ಮತ್ತು ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದ್ದು, ಷೇರು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಯಿತು.

ಎರಡನೆಯದಾಗಿ, ಆರ್‌ಬಿಐ ತನ್ನ ಇತ್ತೀಚಿನ ಹಣಕಾಸು ನೀತಿ ಸಭೆಯ ಟಿಪ್ಪಣಿಗಳನ್ನು ಈ ವಾರ ಬಿಡುಗಡೆಗೊಳಿಸಲಿದೆ. ಇದು ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆ ಆಗಲಿದೆಯೇ ಎಂಬುದರ ಬಗ್ಗೆ ಸುಳಿವು ನೀಡಲಿದೆ. ಇದು ಕೂಡ ಷೇರು ಪೇಟೆ ಮೇಲೆ ಪ್ರಭಾವ ಬೀರಿದೆ.

ಮೂರನೆಯದಾಗಿ, ಕ್ರಿಸ್‌ಮಸ್‌ಗೆ ಪೂರ್ವಭಾವಿಯಾಗಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ಪ್ರಾಫಿಟ್‌ ಬುಕಿಂಗ್‌ ಮಾಡುತ್ತಿರುವುದು ಕೂಡ ಪ್ರಭಾವ ಬೀರಿತು.

Exit mobile version