ಮುಂಬಯಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ, ಚೀನಾದಲ್ಲಿ ಉಲ್ಬಣಿಸಿರುವ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ (Sensex crash) ಭಾರಿ ಕುಸಿಯುತ್ತಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಗ್ಗೆ 10.22 ಗಂಟೆಯ ವೇಳೆಗೆ 670 ಅಂಕ ಕಳೆದುಕೊಂಡು 60,155ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 208 ಅಂಕ ಕಳೆದುಕೊಂಡು 17,918ರಲ್ಲಿ ವಹಿವಾಟು ನಡೆಸುತ್ತಿತ್ತು.
ಅಮೆರಿಕದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ದಿಢೀರ್ ಚೇತರಿಸಿದ್ದು, ಬಡ್ಡಿ ದರ ಏರಿಕೆಯ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇದು ಮಾರುಕಟ್ಟೆಗೆ ನಕಾರಾತ್ಮಕವಾಗಿ ಪರಿಣಮಿಸಿದೆ.
ಕೋವಿಡ್ ಉಲ್ಬಣವಾಗುವ ಭೀತಿ ಹಿನ್ನೆಲೆಯಲ್ಲಿ ಹೆಲ್ತ್ ಕೇರ್ ಮತ್ತು ಔಷಧ ವಲಯದ ಷೇರುಗಳ ದರಗಳು ಮಾತ್ರ ಜಿಗಿಯಿತು. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ವಿಪ್ರೊ, ಮಾರುತಿ, ಇನ್ಫೋಸಿಸ್ ಷೇರುಗಳು ನಷ್ಟಕ್ಕೀಡಾಯಿತು.