Site icon Vistara News

Sensex crash | ಕಳೆದ 4 ದಿನಗಳಲ್ಲಿ ಸೆನ್ಸೆಕ್ಸ್‌ 1,600 ಅಂಕ ಪತನ, ಕಾರಣವೇನು?

stock trader

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 900 ಅಂಕಗಳ ಪತನಕ್ಕೀಡಾಯಿತು. 60 ಸಾವಿರ ಅಂಕಗಳಿಗಿಂತ ಕೆಳಕ್ಕಿಳಿಯಿತು. ಕಳೆದ ನಾಲ್ಕು ದಿನಗಳಲ್ಲಿ (Sensex crash) ಸೆನ್ಸೆಕ್ಸ್‌ 1,600 ಅಂಕ ಕುಸಿದಿದೆ. ಈ ಡಿಸೆಂಬರ್‌ನಲ್ಲಿ ಇದುವರೆಗೆ ಸೆನ್ಸೆಕ್ಸ್‌ 2,900 ಅಂಕ ಕಳೆದುಕೊಂಡಿದೆ. 4.6% ಇಳಿಕೆಯಾಗಿದೆ. ಇದಕ್ಕೆ 6 ಪ್ರಮುಖ ಕಾರಣಗಳ ವಿವರ ಇಲ್ಲಿದೆ.

ಅಮೆರಿಕದ ಜಿಡಿಪಿ ಅಂಕಿ ಅಂಶಗಳು

ಅಮೆರಿಕದಲ್ಲಿ ಗ್ರಾಹಕ ವಿಶ್ವಾಸ, ನಿರುದ್ಯೋಗ, ಜುಲೈ-ಸೆಪ್ಟೆಂಬರ್‌ ಅವಧಿಯ ಜಿಡಿಪಿ ಅಂಕಿ ಅಂಶಗಳು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿತು. ಇವುಗಳೆಲ್ಲವೂ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡುವ ಅಪಾಯವನ್ನು ಬಿಂಬಿಸಿದ್ದು, ಮಾರುಕಟ್ಟೆಗೆ ಮಾರಕವಾಯಿತು.

ಅಮೆರಿಕದಲ್ಲಿ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 3.2% ಜಿಡಿಪಿ ದಾಖಲಾಗಿದೆ. 2.9% ಬರಬಹುದು ಎಂದು ಅಂದಾಜಿಸಲಾಗಿತ್ತು. ಎರಡನೆಯದಾಗಿ ನಿರುದ್ಯೋಗದ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಿತ್ತು. ಜಾಬ್‌ಲೆಸ್‌ ಕ್ಲೇಮ್‌ 216,000ರಿಂದ 222,000ಕ್ಕೆ ತುಸು ಏರಿಕೆಯಾಗಿತ್ತು. ಬಡ್ಡಿ ದರ ಏರಿಕೆಯ ಪರಿಣಾಮ ಆರ್ಥಿಕ ಹಿಂಜರಿತ ಸಂಭವಿಸುವ ಆತಂಕ ಷೇರುದಾರರನ್ನು ಕಂಗಾಲಾಗಿಸಿತು.

ಕೋವಿಡ್‌ ಭೀತಿ: ಚೀನಾದಲ್ಲಿ ಕೋವಿಡ್‌ ಹರಡುತ್ತಿರುವ ರೀತಿ ಕೂಡ ಹೂಡಿಕೆದಾರರಲ್ಲಿ ಭೀತಿ ಸೃಷ್ಟಿಸಿತು. ಭಾರತ ಕೂಡ ಸಕಲ ಸಿದ್ಧತೆ ನಡೆಸಲು ಆರಂಭಿಸಿದೆ.

ಜಪಾನ್‌ನಲ್ಲಿ ಹಣದುಬ್ಬರ: ಜಪಾನ್‌ನಲ್ಲಿ ಗ್ರಾಹಕ ಹಣದುಬ್ಬರ ಕಳೆದ 40 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. (3.7%)

ವಾಲ್‌ ಸ್ಟ್ರೀಟ್‌ ಸುಳಿವು: ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಮೆರಿಕದ ಷೇರುಪೇಟೆಯಲ್ಲಿ ಡೊವ್‌ ಜಾನ್ ಸೂಚ್ಯಂಕ ಇಳಿಯಿತು.

ತಾಂತ್ರಿಕ ಕಾರಣಗಳು: ದಲಾಲ್‌ ಸ್ಟ್ರೀಟ್‌ನಲ್ಲಿ ಗುರುವಾರವೇ ನಿರುತ್ಸಾಹದ ಸುಳಿವು ಲಭಿಸಿದ್ದ ಹಿನ್ನೆಲೆಯಲ್ಲಿ ಸೂಚ್ಯಂಕಗಳು ಶುಕ್ರವಾರ ಕುಸಿಯಿತು. ನಿಫ್ಟಿಗೆ 18,000 ಅಂಕಗಳ ಗಡಿಯಲ್ಲಿ ಪ್ರಬಲ ಬೆಂಬಲ ಸಿಕ್ಕಿದ್ದರೂ, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ವರ್ಷಾಂತ್ಯದ ಒತ್ತಡ: ವರ್ಷಾಂತ್ಯದ ವೇಳೆಗೆ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ಲಾಭಾಂಶವನ್ನು ತೆಗೆದುಕೊಳ್ಳುವುದು ಕೂಡ ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ.

Exit mobile version