ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex ) ಶುಕ್ರವಾರ ಮಧ್ಯಂತರದಲ್ಲಿ 600 ಅಂಕ ಕುಸಿತಕ್ಕೀಡಾಯಿತು. ಸತತ ಎಂಟು ದಿನಗಳ ಏರಿಕೆಯ ಬಳಿಕ ಸೂಚ್ಯಂಕ ಪತನವಾಯಿತು.
ಸೆನ್ಸೆಕ್ಸ್ ಮಧ್ಯಾಹ್ನ 12.30 ರ ವೇಳೆಗೆ 544 ಅಂಕ ಪತನಕ್ಕೀಡಾಗಿ, 62,743ರಲ್ಲಿ ವಹಿವಾಟು ನಡೆಸುತ್ತಿತ್ತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 152 ಅಂಕ ಕಳೆದುಕೊಂಡು 18,660ಕ್ಕೆ ವಹಿವಾಟು ನಡೆಸುತ್ತಿತ್ತು.
ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಟಿಸಿ ಷೇರುಗಳು ಲಾಭ ಗಳಿಸಿತು. ಸೋಲ್, ಟೋಕಿಯೊ, ಶಾಂಘೈ, ಹಾಂಕಾಂಗ್‌ನಲ್ಲಿ ಷೇರು ವಹಿವಾಟು ಮಂದಗತಿಯಲ್ಲಿ ಇತ್ತು.
ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 87 ಡಾಲರ್‌ನಷ್ಟಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 1,565 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.