ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಬೆಳಗ್ಗಿನ ವಹಿವಾಟಿನಲ್ಲಿ ಭಾರಿ ಕುಸಿತಕ್ಕೀಡಾಯಿತು. (Stock Market) ಸೆನ್ಸೆಕ್ಸ್ 634 ಅಂಕ ಕಳೆದುಕೊಂಡು 59,170ಕ್ಕೆ ಬೆಳಗ್ಗೆ 11.30ಕ್ಕೆ ಇಳಿಮುಖವಾಗಿದ್ದರೆ, ನಿಫ್ಟಿ 161 ಅಂಕ ನಷ್ಟದಲ್ಲಿ 17,428ರಲ್ಲಿತ್ತು. ಇದರ ಪರಿಣಾಮ ಹೂಡಿಕೆದಾರರು 3 ಲಕ್ಷ ಕೋಟಿ ರೂ. ಕಳೆದುಕೊಂಡರು.
ಎಸ್‌ವಿಬಿ ಎಫೆಕ್ಟ್: ಅಮೆರಿಕದ ಬ್ಯಾಂಕ್ ಎಸ್‌ವಿಬಿ ಫೈನಾನ್ಷಿಯಲ್ ಗ್ರೂಪ್ ಆರಂಭಿಕ ಹಂತದ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಕಂಪನಿಯ ಷೇರುಗಳ ದರದಲ್ಲಿ 60% ಕುಸಿತ ಸಂಭವಿಸಿದೆ. 6.48 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯ ಕರಗಿತು. ಇದು ಕೇವಲ ವಾಲ್ ಸ್ಟ್ರೀಟ್ ಮಾತ್ರವ್ಲಲದೆ ಜಾಗತಿಕ ಷೇರು ಪೇಟೆಯ ಮೇಲೆಯೂ ಪ್ರಭಾವ ಬೀರಿತು.
ಬ್ಯಾಂಕ್ ಷೇರುಗಳ ದರ ಇಳಿಕೆ: ಎಚ್‌ಡಿಎಫ್‌ಸಿ ಸೇರಿದಂತೆ ಬ್ಯಾಂಕಿಂಗ್ ಷೇರುಗಳ ದರ ಇಳಿಕೆಯಾಯಿತು.
ಅದಾನಿ ಸ್ಟಾಕ್ಸ್: ಅದಾನಿ ಎಂಟರ್‌ಪ್ರೈಸಸ್ ಷೇರು ದರ ಶುಕ್ರವಾರ 4% ಇಳಿಕೆ ದಾಖಲಿಸಿತ್ತು. 10 ಅದಾನಿ ಷೇರುಗಳ ದರ ತಗ್ಗಿತ್ತು.
ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಭೀತಿ: ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಸಭೆಯಮ್ಮು ಮಾರ್ಚ್ 21-22ಕ್ಕೆ ನಡೆಸಲಿದ್ದು, ಬಡ್ಡಿ ದರ ಏರಿಕೆ ನಿರೀಕ್ಷಿಸಲಾಗಿದೆ. ಇದು ಆತಂಕ ಮೂಡಿಸಿದೆ.
ಜಾಗತಿಕ ಮಾರುಕಟ್ಟೆ ತಲ್ಲಣ: ಅಮೆರಿಕ, ಜಪಾನ್, ಹಾಂಕಾಂಗ್‌ನ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಮುಗ್ಗರಿಸಿತ್ತು.
ಎಫ್‌ಐಐ ಹೂಡಿಕೆ ಹಿಂತೆಗೆತ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ 561 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.