ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex crash) ಸೋಮವಾರ ಬೆಳಗ್ಗೆ ೧,೩೦೦ ಅಂಕಗಳ ಭಾರಿ ಕುಸಿತಕ್ಕೀಡಾಗಿದೆ. ಬೆಳಗ್ಗೆ ೯.೪೧ರ ವೇಳೆಗೆ ಸೆನ್ಸೆಕ್ಸ್ ತುಸು ಚೇತರಿಸಿಕೊಂಡು ೫೭,೮೬೧ರ ಮಟ್ಟದಲ್ಲಿತ್ತು. ನಿಫ್ಟಿ ೨೮೨ ಅಂಕ ಕಳೆದುಕೊಂಡು ೧೭,೨೭೬ಕ್ಕೆ ಕುಸಿಯಿತು.
ಮತ್ತೊಂದು ಕಡೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ೮೦.೦೭ರೂ.ಗೆ ಕುಸಿಯಿತು. ಹಣದುಬ್ಬರವನ್ನು ತಗ್ಗಿಸಲು ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಸಲಿದೆ ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಹೇಳಿಕೆ ನೀಡಿರುವ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಕೂಡ ಮುಗ್ಗರಿಸಿತು.
ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಬಹುತೇಕ ಎಲ್ಲ ವಲಯಗಳ ಷೇರುಗಳು ನಷ್ಟಕ್ಕೀಡಾಯಿತು. ಐಟಿ, ರಿಯಾಲ್ಟಿ, ಲೋಹ, ಪಿಎಸ್‌ಯು ಬ್ಯಾಂಕ್ ಷೇರುಗಳು ಕುಸಿಯಿತು.