Site icon Vistara News

Sensex | ಸೆನ್ಸೆಕ್ಸ್‌ 170 ಅಂಕ ಪತನ, ನಿಫ್ಟಿ 20 ಅಂಕ ಇಳಿಕೆ

sensex

ಮುಂಬಯಿ: ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಮತ್ತು ಭಾರತದ ಹಣದುಬ್ಬರ ಅಂಕಿಅಂಶಕ್ಕಾಗಿ ಷೇರುಪೇಟೆ ನಿರೀಕ್ಷೆಯಲ್ಲಿದ್ದರಿಂದ ಇಂದು ಮಾರುಕಟ್ಟೆ ಅಲ್ಪ ಪ್ರಮಾಣದ ಏರಿಳಿತದೊಂದಿಗೆ ವಹಿವಾಟು ನಡೆಸಿತು.
ಇಂದು ನಿಫ್ಟಿ 26 ಅಂಕಗಳ ಏರಿಕೆಯೊಂದಿಗೆ 18376 ರಲ್ಲಿ ಮತ್ತು ಸೆನ್ಸೆಕ್ಸ್ 30 ಅಂಶಗಳ ಇಳಿಕೆಯೊಂದಿಗೆ 61765 ರಲ್ಲಿ ಪ್ರಾರಂಭವಾಯಿತು.

ಬ್ಯಾಂಕ್ ನಿಫ್ಟಿ 40 ಅಂಕಗಳ ಹೆಚ್ಚಳದೊಂದಿಗೆ 42177 ಅಂಕಗಳಿಗೆ ಆರಂಭವಾಯಿತು. ನಿಫ್ಟಿ ಇಂದು ಕೇವಲ 50 ಅಂಕಗಳ ಒಳಗೆ ವಹಿವಾಟು ನಡೆಸಿತು ಮತ್ತು 18400 ರಲ್ಲಿ ರೇಜಿಸ್ಟೇನ್ಸ್ ತಲುಪಿ ನಂತರ ಅಲ್ಪ ಇಳಿಕೆಯಾಯಿತು. ಅದೇ ರೀತಿ ಬ್ಯಾಂಕ್ ನಿಫ್ಟಿ 42200 ರಲ್ಲಿ ರೇಜಿಸ್ಟೇನ್ಸ್ ಮುಟ್ಟಿದ ನಂತರ ಇಳಿಕೆಯಾಯಿತು.
ದಿನದ ಅಂತ್ಯಕ್ಕೆ ನಿಫ್ಟಿ 20 ಅಂಕಗಳ ಅಲ್ಪ ಇಳಿಕೆಯೊಂದಿಗೆ 18329 ರಲ್ಲಿ ಮತ್ತು ಸೆನ್ಸೆಕ್ಸ್ 170 ಅಂಶಗಳ ಕಡಿತದೊಂದಿಗೆ 61624 ರಲ್ಲಿ ಮುಕ್ತಾಯವಾಯಿತು. ಬ್ಯಾಂಕ್ ನಿಫ್ಟಿ 60 ಅಂಕಗಳ ಇಳಿಕೆಯೊಂದಿಗೆ 42076 ರಲ್ಲಿ ಅಂತ್ಯಗೊಂಡಿತು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ.0.48 ರಷ್ಟು ಏರಿಕೆ ಕಂಡರೆ ಮತ್ತು ಮಧ್ಯಮ ಕಂಪನಿಗಳ ಸೂಚ್ಯಂಕ ಶೇ. 0.02 ರಷ್ಟು ಇಳಿಕೆಯಾಗಿದೆ. ಐಟಿ, ಲೋಹ, ರಿಯಾಲಿಟಿ ಸೂಚ್ಯಂಕಗಳು ಏರಿಕೆಯಾದರೆ, ಮಾಧ್ಯಮ, ಎಫ್ಎಂಸಿಜಿ ಮತ್ತು ಬ್ಯಾಂಕಿಂಗ್ ಸೂಚ್ಯಂಕಗಳು ಇಳಿಕೆಯಾಗಿವೆ.
ಇಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1089 ಕೋಟಿ ರೂ ಮೌಲ್ಯದ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು 47 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ
ಹಣದುಬ್ಬರ : ಇಂದು ಭಾರತದ ಹಣದುಬ್ಬರ ದರದ ಅಂಕಿಅಂಶಗಳು ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಕಡಿಮೆ ಅಂಕಿಅಂಶ ಬಂದಿದೆ. ಸಂಜೆ ಪ್ರಕಟಗೊಂಡ ಅಕ್ಟೋಬರ ಹಣದುಬ್ಬರ ದರ ಶೇ. 6.77 ಕ್ಕೆ ಇಳಿಕೆಯಾಗಿದೆ. ಇದು ಸೆಪ್ಟೆಂಬರನಲ್ಲಿ ಶೇ. 7.41 ರಷ್ಟಿತ್ತು. ಅದೇ ರೀತಿ ಸಗಟು ಹಣದುಬ್ಬರ ದರ ಶೇ.8.39 ರಷ್ಟು ದಾಖಲಾಗಿದೆ. ಇದು 19 ತಿಂಗಳ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. ಡಿಸೆಂಬರ್ ನಲ್ಲಿ ನಡೆಯುವ ಆರ್ಬಿಐ ಸಭೆಯಲ್ಲಿ ಬಡ್ಡಿದರ ಏರಿಕೆಯ ಗತಿ ಕಡಿಮೆಯಾಗುವ ನಿರೀಕ್ಷೆಯಲ್ಲಿ ಮಾರುಕಟ್ಟೆ ಇದೆ.

Exit mobile version