Site icon Vistara News

Stock Market: ಸಾರ್ವಕಾಲಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್! 200 ಪಾಯಿಂಟ್ ದಾಟಿದ ನಿಫ್ಟಿ

Stock Market goes up and Sensex jumps by 612 points

ನವದೆಹಲಿ: ಭಾರತದ ಬೃಹತ್ ಕಂಪನಿಗಳ ಅತ್ಯುತ್ತಮ ಪ್ರದರ್ಶನದ ಪರಿಣಾಮ ನಿಫ್ಟಿ (Nifty) ಮತ್ತು ಸೆನ್ಸೆಕ್ಸ್ (Sensex) ಶುಕ್ರವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು (All-Time High) ತಲುಪಿದವು. ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಫಲಿತಾಂಶಗಳು ಮತ್ತು ಲಾಭದ ಕಾರಣಗಳು ಬೇಡಿಕೆಯ ಕುಸಿತವನ್ನು ಮೀರಿದವು ಮತ್ತು ಷೇರು ಪೇಟೆ (Stock Market) ಅತ್ಯುತ್ತಮ ಪ್ರದರ್ಶನ ತೋರಲು ಕಾರಣವಾಯಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 50 ಶೇ.1.22 ಏರಿಕೆಯೊಂದಿಗೆ 21,911 ಪಾಯಿಂಟ್‌ಗೆ ತಲುಪಿಸಿದರೆ, ಮುಂಬೈ ಷೇರು ಪೇಟೆ ಸೆನ್ಸೆಕ್ಸ್, ಮಧ್ಯಾಹ್ನ 12.36ಕ್ಕೆ ಶೇ.1.31 ಏರಿಕೆಯಾಗಿ 72,661 ಕ್ಕೆ ತಲುತು.

ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಘೋಷಿಸಿದ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಷೇರುಗಳು ಶೇ.4.3 ಮತ್ತು ಇನ್ಫೋಸಿಸ್ ಷೇರುಗಳು ಶೇ.7ರಷ್ಟು ಏರಿಕೆಯನ್ನು ದಾಖಲಿಸಿದವು. ಏರಿಕೆಯು ಐಟಿ ಸೂಚ್ಯಂಕವನ್ನು ಸುಮಾರು 5 ಪ್ರತಿಶತದಷ್ಟು ಹೆಚ್ಚಿಸಿದೆ.

ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ, ವಿಪ್ರೋ ಹಾಗೂ ಎ‌ಚ್‌ಸಿಎಲ್‌ ಟೆಕ್ ಕಂಪನಿಗಳು ನಿಫ್ಟಿ 50 ಸೂಚ್ಯಂಕದಲ್ಲಿ ಭಾರೀ ಲಾಭ ಮಾಡಿಕೊಂಡಿವೆ. ಈ ಕಂಪನಿಗಳ ಷೇರುಗಳು ಶೇ.3ರಿಂದ ಶೇ.7ಕ್ಕೆ ಏರಿಕೆಯಾದವು. ಇದೇ ವೇಳೆ, ಅಮೆರಿಕದ ಸಿಪಿಐ ಹಣದುಬ್ಬರವು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.3.4ಕ್ಕೆ ಏರಿಕೆಯಾದ್ದರಿಂದ ಜಾಗತಿಕ ಷೇರು ಪೇಟೆಯಲ್ಲಿ ಋಣಾತ್ಮಕ ಪರಿಣಾಮಕ್ಕೆ ಕಾರಣವಾಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯನ್ ಷೇರುಪೇಟೆಗಳಾದ ಟೋಕಿಯೋ, ಶಾಂಘೈ, ಹಾಂಕಾಂಗ್ ಮಾರುಕಟ್ಟೆಗಳು ಅತ್ಯುತ್ತಮ ಪ್ರದರ್ಶನ ತೋರಿದರೆ, ಸೋಲ್ ಷೇರು ಪೇಟೆ ಮಾತ್ರ ಋಣಾತ್ಮಕವಾಗಿ ತನ್ನ ವ್ಯವಹಾರವನ್ನು ಮುಗಿಸಿತು. ಹಾಗೆಯೇ, ಅಮೆರಿಕ ಮಾರುಕಟ್ಟೆಗಳು ಕೂಡ ಅಷ್ಟೇನೂ ನಷ್ಟವನ್ನು ತೋರಿಸಿಲ್ಲ.

Exit mobile version