ಮುಂಬೈ: ಇಂದಿನ ವಹಿವಾಟಿನಲ್ಲಿ ಬಿಎಸ್‌ಇ(BSE) ಸೆನ್ಸೆಕ್ಸ್ ಮತ್ತೆ ಇತಿಹಾಸ ಸೃಷ್ಟಿಸಿದೆ(Sensex Jump). ಸೆನ್ಸೆಕ್ಸ್ ಮೊದಲ ಬಾರಿಗೆ 81,000 ಮಟ್ಟವನ್ನು ದಾಟುವಲ್ಲಿ ಯಶಸ್ವಿಯಾಗಿದೆ. ಬೆಳಿಗ್ಗೆ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. ಆದರೆ ಹೂಡಿಕೆದಾರರ ಕೆಳಹಂತದಿಂದ ಖರೀದಿ ಮರಳಿದ ನಂತರ ಸೆನ್ಸೆಕ್ಸ್ 810 ಪಾಯಿಂಟ್ಸ್ ಏರಿಕೆ ಕಂಡು 81,203 ಪಾಯಿಂಟ್ಸ್‌ಗಳಲ್ಲಿ ಗರಿಷ್ಠ ಮಟ್ಟ ತಲುಪಿತು. ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ(Nifty) ಕೂಡ ಮೊದಲ ಬಾರಿಗೆ 24,838 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ನಿಫ್ಟಿಯಲ್ಲಿ 234 ಅಂಕಗಳ ಅದ್ಭುತ ಚೇತರಿಕೆ ಕಂಡುಬಂದಿದೆ.
ಬೆಳಗ್ಗೆ ಸೆನ್ಸೆಕ್ಸ್ ಸುಮಾರು 200 ಅಂಕಗಳ ಕುಸಿತದೊಂದಿಗೆ ಪ್ರಾರಂಭವಾಯಿತು. ಬಳಿಕ 326 ಅಂಕಗಳ ಕುಸಿತ ಕಂಡಿತು. ಆದರೆ ಈ ಹಂತದಲ್ಲಿ, ಬ್ಯಾಂಕಿಂಗ್, ಐಟಿ ಮತ್ತು ಎಫ್‌ಎಂಸಿಜಿ ಷೇರುಗಳಲ್ಲಿನ ಖರೀದಿಯ ಹೆಚ್ಚಾಗುತ್ತಿದ್ದಂತೆ ಸೆನ್ಸೆಕ್ಸ್ 813 ಪಾಯಿಂಟ್‌ಗಳಿಂದ ಚೇತರಿಸಿಕೊಂಡಿತು ಮತ್ತು ಸೆನ್ಸೆಕ್ಸ್ 81,203 ಪಾಯಿಂಟ್‌ಗಳ ಗರಿಷ್ಠ ಮಟ್ಟವನ್ನು ತಲುಪಿತು. ಸೆನ್ಸೆಕ್ಸ್ 81,000 ಗಡಿ ದಾಟುವಲ್ಲಿ ಯಶಸ್ವಿಯಾಗಿರುವುದು ಇದೇ ಮೊದಲು. ಇನ್ನು ನಿಫ್ಟಿ ಕೂಡ ನಿನ್ನೆ 110 ಪಾಯಿಂಟ್‌ಗಳಷ್ಟು ಕುಸಿದಿತ್ತು. ಆದರೆ ಕಡಿಮೆ ಮಟ್ಟದಿಂದ, ನಿಫ್ಟಿ 243 ಪಾಯಿಂಟ್‌ಗಳಿಂದ ಚೇತರಿಸಿಕೊಂಡಿತು, ನಂತರ ಸೂಚ್ಯಂಕವು ಗರಿಷ್ಠ 24,746.80 ಪಾಯಿಂಟ್‌ಗಳನ್ನು ತಲುಪಿತು.
ಬಜೆಟ್‌ಗೂ ಮುನ್ನವೇ ಸೆನ್ಸೆಕ್ಸ್ ದಾಖಲೆ
ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಈ ಅದ್ಭುತ ಏರಿಕೆಗೆ ಪ್ರಮುಖ ಕಾರಣ ಮುಂಬರು ದಿನಗಳಲ್ಲಿ ನಡೆಯಲಿರುವ ಕೇಂದ್ರ ಬಜೆಟ್‌ನಿಂದ ಎಂದು ಅಂದಾಜಿಸಲಾಗಿದೆ. ಬಜೆಟ್‌ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಾಗಿ ಹೆಚ್ಚಿನ ಹಣವನ್ನು ಒದಗಿಸಬಹುದು ಮತ್ತು ರೈಲ್ವೆ, ರಕ್ಷಣೆ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ದೊಡ್ಡ ಘೋಷಣೆಗಳು ಸಾಧ್ಯ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಬಳಕೆ ಹೆಚ್ಚಿಸಲು, ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಬಜೆಟ್‌ನಲ್ಲಿ ಉಡುಗೊರೆಗಳನ್ನು ನೀಡಬಹುದು, ಅದಕ್ಕಾಗಿಯೇ ಬಜೆಟ್ ಮಂಡನೆ ಮೊದಲು ಈ ವಹಿವಾಟಿನಲ್ಲಿ ಈ ಹೆಚ್ಚಳ ಕಂಡುಬಂದಿದೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ವ್ಯಾಪಾರ
ಜಪಾನ್‌ನ ನಿಕ್ಕಿ ಸೂಚ್ಯಂಕ 1.99% ಮತ್ತು ಚೀನಾದ ಶಾಂಘೈ ಕಾಂಪೋಸಿಟ್ 0.41% ನಷ್ಟು ಕುಸಿದಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ 0.05% ಹೆಚ್ಚಾಗಿದೆ. ಇನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಬುಧವಾರ ಏರಿಕೆ ಕಂಡುಬಂದಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 243 ಪಾಯಿಂಟ್‌ಗಳು (0.59%) ಏರಿಕೆಯಾಗಿ 41,198 ಕ್ಕೆ ತಲುಪಿದೆ. ಆದರೆ NASDAQ 512 (2.77%) ಪಾಯಿಂಟ್‌ಗಳಿಂದ ಹೆಚ್ಚಾಯಿತು ಮತ್ತು 17,996 ನಲ್ಲಿ ಕೊನೆಗೊಂಡಿತು.
ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್, ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಮಾರುಕಟ್ಟೆ ನಿಧಾನವಾಗಿ ಏರಿಕೆ ಕಾಣುತ್ತಿವೆ. ಇನ್ನು ಇನ್ಫೋಸಿಸ್, ಟಿಸಿಎಸ್, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಮತ್ತು ಎಸ್‌ಬಿಐ ಮಾರುಕಟ್ಟೆಗಳಲ್ಲೂ ಚೇತರಿಕೆ ಕಂಡು ಬಂದಿದೆ.
ಇದನ್ನೂ ಓದಿ:Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಇತ್ತು ಆ 6 ಪ್ರಮುಖ ಕಾರಣಗಳು