ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ೪೬೫ ಅಂಕ ಜಿಗಿಯಿತು.
ಸೆನ್ಸೆಕ್ಸ್ ೪೬೫ ಅಂಕ ಗಳಿಸಿ ೫೮,೮೫೩ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ ೧೨೭ ಅಂಕ ಏರಿಕೊಂಡು, ೧೭,೫೨೫ ಅಂಕಗಳಿಗೆ ದಿನದ ಆಟ ಮುಗಿಸಿತು. ಮಹೀಂದ್ರಾ & ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಲ್&ಟಿ, ಡಾ ರೆಡ್ಡೀಸ್ ಕಂಪನಿಯ ಷೇರು ದರ ವೃದ್ಧಿಸಿತು. ಆದರೆ ಎಸ್‌ಬಿಐ,
ಈ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ ೯೪.೩೨ ಡಾಲರ್‌ಗೆ ತಗ್ಗಿತು. ಅಲ್ಟ್ರಾ ಟೆಕ್ ಸಿಮೆಂಟ್, ನೆಸ್ಲೆ, ವಿಪ್ರೊ. ಪವರ್‌ಗ್ರಿಡ್ ಷೇರುಗಳು ನಷ್ಟಕ್ಕೀಡಾಯಿತು. ವಿದೇಶಿ ವಿನಿಮಯದ ಅಂಕಿ ಅಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಶುಕ್ರವಾರ ೧,೬೦೫ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.
ಎಸ್‌ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳು ಸೋಮವಾರ ಇಳಿಕೆ ದಾಖಲಿಸಿತ್ತು.