ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 600 ಅಂಕಗಳ ಏರಿಕೆ ದಾಖಲಿಸಿದ್ದು, 61,032ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 158 ಅಂಕ ಚೇತರಿಸಿಕೊಂಡು 17,929ಕ್ಕೆ ಸ್ಥಿರವಾಯಿತು. ಅಮೆರಿಕದಲ್ಲಿ ಹಣದುಬ್ಬರದ ಅಂಕಿ ಅಂಶಗಳು ಪ್ರಕಟವಾಗಲಿದ್ದು, ಇದಕ್ಕೂ ಮುನ್ನ ಜಾಗತಿಕ ಷೇರು ಮಾರುಕಟ್ಟೆಗಳು ಚೇತರಿಸಿತು. ಇದರ ಸುಳಿವು ಸಿಕ್ಕಿದ್ದರಿಂದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳೂ ಜಿಗಿಯಿತು. ಕಳೆದ ಎರಡು ವಹಿವಾಟು ದಿನಗಳಿಂದ ಷೇರು ಮಾರುಕಟ್ಟೆ ನಷ್ಟದಲ್ಲಿತ್ತು.
ಐಟಿಸಿ, ರಿಲಯನ್ಸ್, ಬಜಾಜ್ ಫೈನಾನ್ಸ್ ಷೇರು ದರ ಏರಿತು. ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಎಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ವಿಪ್ರೊ, ಮಹೀಂದ್ರಾ & ಮಹೀಂದ್ರಾ, ಭಾರ್ತಿ ಏರ್‌ಟೆಲ್ ಷೇರು ದರ ಕೂಡ ವೃದ್ಧಿಸಿತು. ಮತ್ತೊಂದು ಕಡೆ ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಎಲ್&ಟಿ, ಸನ್ ಫಾರ್ಮಾ, ಏಷ್ಯನ್ ಪೇಂಟ್ಸ್, ಮಾರುತಿ ಸುಜುಕಿ ಷೇರು ದರ ಇಳಿಯಿತು.
ಬ್ರೆಂಟ್ ಕಚ್ಚಾ ತೈಲ ದರ ಮಂಗಳವಾರ 0.9% ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 85.81 ಡಾಲರ್‌ನಷ್ಟಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ 82.75 ರೂ.ನಷ್ಟಿತ್ತು.