ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ ಮಧ್ಯಂತರದಲ್ಲಿ 650 ಅಂಕ ಜಿಗಿಯಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 18,000 ಅಂಕಗಳ ಮೈಲುಗಲ್ಲನ್ನು ಮತ್ತೆ ದಾಟಿತು. (Stock Market) ಟಿಸಿಎಸ್ ಷೇರು ದರ 3% ಏರಿತು.
ಅಮೆರಿಕದಲ್ಲಿ ಸದ್ಯಕ್ಕೆ ಬಡ್ಡಿ ದರ ಏರಿಕೆಯ ಸಾಧ್ಯತೆ ಕ್ಷೀಣಿಸಿರುವುದು ಜಾಗತಿಕ ಷೇರು ಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಹೂಡಿಕೆದಾರರ ಸಂಪತ್ತಿನಲ್ಲಿ 3.45 ಲಕ್ಷ ಕೋಟಿ ರೂ. ಏರಿತು. ಬಿಎಸ್‌ಟಿ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 283 ಲಕ್ಷ ಕೋಟಿ ರೂ.ಗೆ ವೃದ್ಧಸಿತು.
ಅಮೆರಿಕದಲ್ಲಿ ಪೇರೋಲ್ ಡೇಟಾಗಳು ಸಕಾರಾತ್ಮಕವಾಗಿರುವುದು, ಬಾಂಡ್‌ಗಳ ಉತ್ಪತ್ತಿ ವೃದ್ಧಿಸಿರುವುದು, ಡಾಲರ್ ಎದುರು ರೂಪಾಯಿಯ ಚೇತರಿಕೆ, ಕೇಂದ್ರ ಬಜೆಟ್ ಹೂಡಿಕೆದಾರರ ಸ್ನೇಹಿಯಾಗುವ ನಿರೀಕ್ಷೆಗಳ ಪರಿಣಾಮ ಷೇರು ಸೂಚ್ಯಂಕ ಜಿಗಿಯಿತು.