Site icon Vistara News

Sensex | ಸೆನ್ಸೆಕ್ಸ್‌ 774 ಅಂಕ ಜಿಗಿತ, 60,000ಕ್ಕೆ ಸನಿಹ, ಡಿಶ್‌ ಟಿವಿ ಷೇರು ದರ 9% ಏರಿಕೆ

bse

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ ಬೆಳಗ್ಗೆ 774 ಅಂಕ ಜಿಗಿದಿದ್ದು, 59,921ಕ್ಕೆ ತಲುಪಿತು. ನಿಫ್ಟಿ 244 ಅಂಕ ವೃದ್ಧಿಸಿ 17,866 ಕ್ಕೆ ಹೆಚ್ಚಳವಾಯಿತು.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ನ ಮಹತ್ವದ ಸಭೆ ಸೆ.20-21ರಂದು ನಡೆಯುತ್ತಿದ್ದು, ಇದಕ್ಕೂ ಮುನ್ನ ಜಾಗತಿಕ ಷೇರು ಪೇಟೆ ಗಣನೀಯ ಚೇತರಿಸಿರುವುದು ಕುತೂಹಲ ಮೂಡಿಸಿದೆ. ಫೆಡರಲ್‌ ರಿಸರ್ವ್‌ ಕನಿಷ್ಠ 0.75% ಬಡ್ಡಿ ದರ ಏರಿಸುವ ನಿರೀಕ್ಷೆ ಉಂಟಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ತಿಂಗಳು ಇದುವರೆಗೆ 12,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಅಮೆರಿಕದಲ್ಲಿ ಷೇರು ಸೂಚ್ಯಂಕಗಳು ಚೇತರಿಸಿವೆ. ಅಮೆರಿಕ ಮಾತ್ರವಲ್ಲದೆ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮತ್ತು ಬ್ಯಾಂಕ್‌ ಆಫ್‌ ಜಪಾನ್‌ ಕೂಡ ಈ ವಾರ ಸಭೆ ಸೇರಲಿದ್ದು, ಹಣಕಾಸು ನೀತಿ ಪ್ರಕಟಿಸಲಿವೆ.

ಡಿಶ್‌ ಟಿವಿಯ ಪ್ರವರ್ತಕರು ಕಂಪನಿಯ ಆಡಳಿತ ಮಂಡಳಿಯಿಂದ ನಿರ್ಗಮಿಸಲು ತೀರ್ಮಾನಿಸಿದ ಬೆನ್ನಲ್ಲೇ, ಡಿಶ್‌ ಟಿವಿ ಷೇರು ದರ 9% ಏರಿಕೆಯಾಗಿದೆ.

Exit mobile version