Site icon Vistara News

Sensex | 1,100 ಅಂಕ ಕುಸಿತದಿಂದ ಜಿಗಿದ ಸೆನ್ಸೆಕ್ಸ್, ಬ್ಯಾಂಕಿಂಗ್‌ ಷೇರುಗಳ ಚೇತರಿಕೆ

sensex

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ (Sensex) ಬುಧವಾರ ಮಧ್ಯಂತರ ವಹಿವಾಟಿನಲ್ಲಿ 1,100 ಅಂಕಗಳ ಕುಸಿತಕ್ಕೀಡಾದರೂ, ಬಳಿಕ ಚೇತರಿಸಿತು. ಮಧ್ಯಾಹ್ನ 2.40ರ ವೇಳೆಗೆ ಸೆನ್ಸೆಕ್ಸ್‌ 60,614 ಅಂಕಗಳಿಗೆ ಚೇತರಿಸಿತು. ನಿಫ್ಟಿ 8.75 ಅಂಕ ಗಳಿಸಿ 18,074 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಅಂಕಿಅಂಶಗಳಿಂದ ಬೆಳಿಗ್ಗೆ ನಿಫ್ಟಿ 298 ಅಂಕಗಳ ಭಾರಿ ಕುಸಿತದೊಂದಿಗೆ 17771 ಕ್ಕೆ ಪ್ರಾರಂಭವಾಯಿತು. ನಂತರ ಮಾರುಕಟ್ಟೆಯಲ್ಲಿ ಗೂಳಿ ಅಬ್ಬರಸಿತು. ಫ್ಯೂಚರ್ ಆಂಡ್ ಆಪಷನ್ ಮಾರುಕಟ್ಟೆಯ ಶಾರ್ಟ್ ಕವರಿಂಗ್ ನಿಂದ ನಿಫ್ಟಿ ನಿರಂತರ ವಾಗಿ ಏರಿಕೆ ಕಂಡಿತು. ಈ ಏರಿಕೆಗೆ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಬಹುಪಾಲು ಕೊಡುಗೆ ನೀಡಿದವು. ದಿನದ ಅಂತ್ಯಕ್ಕೆ ನಿಫ್ಟಿ 66 ಅಂಕಗಳ ಇಳಿಕೆಯೊಂದಿಗೆ 18003 ಕ್ಕೆ ಮುಕ್ತಾಯವಾಯಿತು.
ಮಾರುಕಟ್ಟೆಯ ಇನ್ನೊಂದು ಪ್ರಮುಖ ಇಂಡೆಕ್ಸ್ ಬ್ಯಾಂಕ್ ನಿಫ್ಟಿ ಸಹ ಬೆಳಿಗ್ಗೆ 564 ಅಂಕಗಳ ಕುಸಿತದಿಂದ 40308ರಿಂದ ಪ್ರಾರಂಭವಾದರೂ ನಂತರ ಬ್ಯಾಂಕಿಂಗ್ ಷೇರುಗಳ ನಿರಂತರ ಬೇಡಿಕೆಯಿಂದಾಗಿ 1100 ಅಂಕಗಳ ಏರಿಕೆ ಕಂಡು ದಿನದ ಅಂತ್ಯಕ್ಕೆ 532 ಅಂಕಗಳ ಏರಿಕೆಯೊಂದಿಗೆ 41405ಕ್ಕೆ ಮುಕ್ತಾಯವಾಯಿತು.
ಐಟಿ, ತೈಲ ಮತ್ತು ಗ್ಯಾಸ್, ಆರೋಗ್ಯಕ್ಷೇತ್ರ ಮತ್ತು ವಾಹನ ಉತ್ಪಾದನಾ ವಲಯದ ಷೇರುಗಳು ಮಾರುಕಟ್ಟೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಿದವು.
ಭಾರತೀಯ ಬ್ಯಾಂಕಿಂಗ್ ನಲ್ಲಿ ಅಗ್ರಜ ಸ್ಥಾನದಲ್ಲಿರುವ ಎಸ್ಬಿಐ ಮಾರುಕಟ್ಟೆ ಮೌಲ್ಯ ಇಂದು 5 ಲಕ್ಷ ಕೋಟಿ ದಾಟಿದೆ. ಬ್ಯಾಂಕಿಂಗ್ ವಲಯದ ಪ್ರಮುಖ ಬ್ಯಾಂಕಗಳಲ್ಲಿ ಒಂದಾದ ಆಕ್ಸಿಸ್ಸ್ ಬ್ಯಾಂಕ್ ಒಂದನ್ನು ಹೊರತುಪಡಿಸಿ ಎಲ್ಲ ಪ್ರಮುಖ ಬ್ಯಾಂಕಗಳು ಇಂದು ಏರಿಕೆ ಕಂಡವು. ಇಂಡಸ್ ಇಂಡ್ ಬ್ಯಾಂಕ್ 4.4% , ಎಸ್ಬಿಐ 2.4%, ಕೋಟಕ್ ಬ್ಯಾಂಕ್ 1.6% ಮತ್ತು ಹೆಚ್ಡಿಎಫ್ಸಿ ಬ್ಯಾಂಕ್ 1% ಏರಿಕೆ ಕಂಡವು.
ಅದೇ ರೀತಿ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್ 4.5%, ಟಾಟಾ ಕನ್ಸಲಟೆನ್ಸಿ 3.3%, ಟೆಕ್ ಮಹಿಂದ್ರಾ 2.8% ಮತ್ತು ಹೆಚ್ಸಿಎಲ್ ಟೆಕ್ನಾಲಜಿಸ್ 2.4% ಮಾರಾಟದ ಒತ್ತಡಕ್ಕೆ ಒಳಗಾದವು.
ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರೀಯ ಸರಕು ಮತ್ತು ಸೇವಾ ಕಾಯ್ದೆಯನ್ನು ಜಾರಿಗೆ ತರುತ್ತಿರುವ ಸುದ್ದಿ ಸರಕು ವಿಭಾಗದ ಷೇರುಗಳಿಗೆ ಚೇತೋಹಾರಿಕೆ ನೀಡಿ ಬಹುತೇಕ ಪ್ರಮುಖ ಷೇರುಗಳು ಭಾರಿ ಏರಿಕೆ ಕಂಡವು.
ಐಪೋನ್ಗಳನ್ನು ವೇದಾಂತ ಕಂಪನಿ ಇನ್ನು ಏರಡು ವರ್ಷಗಳಲ್ಲಿ ಗುಜರಾತನಲ್ಲಿ ಉತ್ಪಾದನೆ ಆರಂಭಿಸುತ್ತಿದೆ ಎಂದು ಕಂಪನಿಯ ಪ್ರರ್ವತಕರು ಘೋಷಿಸುತ್ತಿದಂತೆ ವೇದಾಂತ ಷೇರುಗಳು 10% ಏರಿಕೆ ಕಂಡವು. ಇದೇ ಕಂಪನಿ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಪ್ರಾರಂಭಿಸುತ್ತಿದ್ದು ಇದು ಮೊಬೈಲ್ ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುವುದರ ಜೊತೆಗೆ ದರ ಇಳಿಕೆಗೂ ಕಾರಣವಾಗಲಿದೆ. ಜೊತೆಗೆ ಐಪೋನ್ ಉತ್ಪಾದನೆಗೆ ವೇದಾಂತ ಕಂಪನಿಯು ಟಾಟಾ ಕಂಪನಿಯ ಜೊತೆಗೂ ಮಾತುಕತೆ ನಡೆಸುತ್ತಿದೆ.
ನಿನ್ನೆ ಅಮೇರಿಕಾದ ಹಣದುಬ್ಬರ ದರ ನೀರಿಕ್ಷೇಗೂ ಮೀರಿ ಬಂದಿದ್ದರಿಂದ ಅಮೇರಿಕಾ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ಆಪಲ್, ಟೆಸ್ಲಾ, ಮೆಟಾವರ್ಸಾ, ನೆಟಫ್ಲಿಕ್ಸ್, ಗೂಗಲ್ ಮೂಲ ಕಂಪನಿ ಆಲಫಾಬಿಟ್ ಸೇರಿದಂತೆ ಬಹುತೇಕ ಪ್ರಮುಖ ಕಂಪನಿಗಳ ಅಧಿಕ ಮಾರಾಟ ಒತ್ತಡಕ್ಕೆ ಒಳಗಾದವು. ಅದೇ ರೀತಿ ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋ ಕರೆನ್ಸಿಗಳು ಒತ್ತಡಕ್ಕೆ ಒಳಗಾದವು

ಐಟಿ ಕಂಪನಿಗಳ ಷೇರು ದರ ಇಳಿಯಿತು. ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಮತ್ತು ಎಸ್‌ಬಿಐ ಷೇರು ದರ ಲಾಭ ಗಳಿಸಿತು.

Exit mobile version