ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ದಾಖಲೆಯ ಎತ್ತರಕ್ಕೆ ಏರಿದೆ. ( Stock market ) ಸೆನ್ಸೆಕ್ಸ್ 803 ಅಂಕ ಏರಿಕೆಯಾಗಿ 64,718ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 216 ಅಂಕ ಏರಿಕೆಯಾಗಿ 19,189ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್ ಕಳೆದ ಮೂರು ದಿನಗಳಿಂದ 1800 ಅಂಕ ಏರಿಕೆಯಾಗಿದ್ದು, ಮೊಟ್ಟ ಮೊದಲ ಬಾರಿಗೆ ಶುಕ್ರವಾರ 64,700 ಅಂಕಗಳ ಗಡಿಯನ್ನು ಕ್ರಮಿಸಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ 50 ಎರಡೂ ಶುಕ್ರವಾರ 1%ಗೂ ಹೆಚ್ಚು ಲಾಭ ದಾಖಲಿಸಿತು. ಸಾರ್ವಕಾಲಿಕ ಎತ್ತರಕ್ಕೆ ಉಭಯ ಸೂಚ್ಯಂಕಗಳೂ ತಲುಪಿತು. ಹಾಗಾದರೆ ಇತ್ತೀಚಿನ ತಿಂಗಳುಗಳಲ್ಲಿ ಕುಸಿತದ ಹಾದಿಯಲ್ಲಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಚೇತರಿಕೆ ದಾಖಲಿಸಿದ್ದು ಹೇಗೆ? ಇದಕ್ಕೆ ಕಾರಣವಾಗಿರುವ ದೇಶೀಯ ಮತ್ತು ವಿದೇಶಿ ವಿದ್ಯಮಾನಗಳ ಎಫೆಕ್ಟ್ ಹೇಗಿತ್ತು? ನೋಡೋಣ.
ವಿದೇಶಿ ಸಾಂಸ್ಥಿಕ ಹೂಡಿಕೆಯ ಒಳಹರಿವು ಹೆಚ್ಚಳ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗೆ ಮರಳಿರುವುದರಿಂದ ಸೂಚ್ಯಂಕಗಳು ಚೇತರಿಸಿತು. ಇತ್ತೀಚಿನ ರ‍್ಯಾಲಿಗೆ ಇದು ನಿರ್ಣಾಯಕವಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿದೇಶಿ ಹೂಡಿಕೆದಾರರು 10 ಶತಕೋಟಿ ಡಾಲರ್ (82,000 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ಫ್ರೆಂಚ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಅಮುಂಡಿ ಪ್ರಕಾರ,
ಪ್ರಮುಖ ವಲಯಗಳಲ್ಲಿ ಚೇತರಿಕೆ: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಷೇರುಗಳ ಗಣನೀಯ ಚೇತರಿಕೆ ಕಂಡು ಬಂದಿತು. ಇನ್ಫೋಸಿಸ್ ಷೇರು ದರ 3.3% ಏರಿತು. (1,335 ರೂ.) ಟಿಸಿಎಸ್ ಷೇರು ದರ 3% ಏರಿದ್ದು, 3,302 ರೂ.ಗೆ ವೃದ್ಧಿಸಿತು. ಆಟೊಮೊಬೈಲ್ ಷೇರುಗಳು ಶುಕ್ರವಾರ ಲಾಭ ಗಳಿಸಿತು. ಎಂ&ಎಂ, ಟೈಟನ್ ಕಂಪನಿ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಲಾರ್ಸನ್ & ಟೂಬ್ರೊ ಸಾರ್ವಕಾಲಿಕ ಎತ್ತರಕ್ಕೇರಿತು.
ಇದನ್ನೂ ಓದಿ: Adani group : ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರು ಮಾರಿದ ಅದಾನಿ ಕುಟುಂಬ
ಜಾಗತಿಕ ಮಾರುಕಟ್ಟೆ: ಚೀನಾದಲ್ಲಿ ಕಾರ್ಖಾನೆಗಳಲ್ಲಿನ ಉತ್ಪಾದನಾ ಚಟುವಟಿಕೆಗಳು ಸತತ ಮೂರನೇ ತಿಂಗಳಿಗೆ ಜೂನ್‌ನಲ್ಲಿ ಚುರುಕಾಗಿತ್ತು. ಇದು ಷೇರು ಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಯುರೋಪ್‌ನಲ್ಲಿ ಕೂಡ ಈಕ್ವಿಟಿ ಲಾಭದಾಯಕವಾಗಿತ್ತು.
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಡಿಸೆಂಬರ್ ಅಂತ್ಯಕ್ಕೆ 65,000 ಕ್ಕೆ ಜಿಗಿಯುವ ಸಾಧ್ಯತೆ ಇದೆ. 2023ರ ಮೊದಲಾರ್ಧದಲ್ಲಿ ಷೇರುಪೇಟೆ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು ಎನ್ನುತ್ತಾರೆ ತಜ್ಞರು. ವಿದೇಶಿ ಹೂಡಿಕೆಯ ಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಡಿಸೆಂಬರ್ ವೇಳೆಗೆ 65 ಸಾವಿರ ಅಂಕಗಳ ಗಡಿ ದಾಟುವ ಸಾಧ್ಯತೆ ಇದೆ. ಭಾರತದ ಆರ್ಥಿಕತೆ ಇತರ ಪ್ರಗತಿಪರ ಎಕಾನಮಿಗೆ ಹೋಲಿಸಿದರೆ ಈಗ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ 2023ರ ದ್ವಿತೀಯಾರ್ಧದಲ್ಲಿ ಕೂಡ ಷೇರು ಸೂಚ್ಯಂಕಗಳು ಜಿಗಿಯುವ ಸಾಧ್ಯತೆ ಇದೆ. ಎಫ್‌ಎಂಸಿಜಿ, ರಿಯಾಲ್ಟಿ, ಆಟೊಮೊಬೈಲ್ ವಲಯದ ಷೇರು ದರ ಏರಿಕೆಯಾಗುವ ಸಾಧ್ಯತೆ ಇದೆ.
ಮೇನಲ್ಲಿ ಮೂಲಸೌಕರ್ಯ ಮಂದಗತಿ: ಭಾರತದ ಪ್ರಮುಖ ಮೂಲಸೌಕರ್ಯ ಉದ್ದಿಮೆಗಳ ಪ್ರಗತಿ ಕಳೆದ ಮೇನಲ್ಲಿ 4.3%ಕ್ಕೆ ಇಳಿಕೆಯಾಗಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಉತ್ಪಾದನೆ ಇಳಿಕೆ ಆಗಿರುವುದು ಇದಕ್ಕೆ ಕಾರಣ.