ನವದೆಹಲಿ: ಕಳೆದ ಐದು ದಿನಗಳಲ್ಲಿ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತದ ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ 15.74 ಲಕ್ಷ ಕೋಟಿ ರೂ. ಕರಗಿದೆ.
ಸೆನ್ಸೆಕ್ಸ್ ಗುರುವಾರ 1,045 ಅಂಕ ಕುಸಿದಿತ್ತು. ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್ 3,824 ಅಂಕ ಕಳೆದುಕೊಂಡಿದೆ.
ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇನಲ್ಲಿ ನೋಂದಾಯಿತ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ 15.74 ಲಕ್ಷ ಕೋಟಿ ರೂ. ಇಳಿದಿದ್ದು, 2,39,20,631 ಕೋಟಿ ರೂ.ಗೆ ತಗ್ಗಿದೆ. ಶುಕ್ರವಾರ ಕೂಡ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 418 ಅಂಕ ಪತನವಾಗಿದ್ದು, 51,083 ಅಂಕಗಳಿಗೆ ಇಳಿದಿತ್ತು.