Site icon Vistara News

Sensex | ನಿಲ್ಲದ ಸೆನ್ಸೆಕ್ಸ್‌ ತಲ್ಲಣ, 412 ಅಂಕ ಪತನ, ಐಟಿ, ಬ್ಯಾಂಕಿಂಗ್‌ ಷೇರು ದರ ಇಳಿಕೆ

stock trader

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌, ಗುರುವಾರ 412 ಅಂಕಗಳನ್ನು ಕಳೆದುಕೊಂಡು 59,934ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಕ ನಿಫ್ಟಿ 126 ಅಂಕ ನಷ್ಟದಲ್ಲಿ 17,877ಕ್ಕೆ ಸ್ಥಿರವಾಯಿತು.

ನಿನ್ನೆಯ ಅನೀರಿಕ್ಷಿತ ಏರಿಕೆಯನ್ನು ಗುರುವಾರ ಬೆಳಗ್ಗೆ ಷೇರುಪೇಟೆ ಮುಂದುವರಿಸಿಕೊಂಡು ಪ್ರಾರಂಭವಾದರೂ, ನಂತರ ಮಾರಾಟದ ಒತ್ತಡಕ್ಕೆ ಒಳಗಾಗಿ ಕುಸಿತ ದಾಖಲಿಸಿತು. ಷೇರುದಾರರು ಲಾಭಾಂಶ ಪಡೆಯಲು ಷೇರುಗಳನ್ನು ಮಾರಾಟ ಮಾಡಿದರು. ವಾಯಿದಾ ಮಾರುಕಟ್ಟೆಯ ( ಫ್ಯುಚರ್ ಆಂಡ್ ಆಪ್ಷನ್ ) ವಾರಾಂತ್ಯವಾಗಿದ್ದರಿಂದ ಸೂಚ್ಯಂಕ ಇಳಿಯಿತು. ದೇಶಿಯ ಹೂಡಿಕೆದಾರರ ಜೊತೆಗೆ ವಿದೇಶಿ ಹೂಡಿಕೆದಾರರು ಸೇರಿ ಒಟ್ಟು 2000 ಕೋಟಿ ರೂಪಾಯಿಗಿಂತ ಹೆಚ್ಚು ಷೇರುಗಳನ್ನು ಗುರುವಾರ ಮಾರಾಟ ಮಾಡಿದರು.
ಐಟಿ, ಲೋಹ, ಮಾಧ್ಯಮ, ಔಷಧ ಮತ್ತು ರಿಯಾಲಿಟಿ ಕ್ಷೇತ್ರದ ಷೇರುಗಳು ನಷ್ಟಕ್ಕೀಡಾಯಿತು. ಆದರೆ ವಾಹನ ತಯಾರಿಕೆ, ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರದ ಷೇರುಗಳು ಲಾಭ ಗಳಿಸಿತು.
ಎಂಆರ್ ಎಫ್ ದರ 92,498 ರೂ.ಗೆ ಏರಿಕೆ:
ಷೇರುಪೇಟೆಯಲ್ಲಿ ಅತಿ ಹೆಚ್ಚು ದರವನ್ನು ಹೊಂದಿರುವ ಎಂಆರ್ ಎಫ್ ಷೇರು 8% ಏರಿಕೆ ಕಂಡು 92868 ಕ್ಕೆ ಮುಕ್ತಾಯವಾಯಿತು. ಅದೇ ರೀತಿ ಟೈರು ತಯಾರಿಕಾ ಕಂಪನಿಗಳಾದ ಸಿಯೆಟ್, ಅಪೋಲೊ ಟೈರ್ ಮತ್ತು ಜೆಕೆ ಟೈರ್ ಕಂಪನಿಗಳು ಭಾರಿ ಏರಿಕೆಯನ್ನು ದಾಖಲಿಸಿದವು.
ಜಿಡಿಪಿ ಇಳಿಕೆ
ಅಂತಾರಾಷ್ಟ್ರೀಯ ಕ್ರೆಡಿಟ್ ಏಜೆನ್ಸಿಯಾದ ಫಿಚ್ ಭಾರತದ ಜಿಡಿಪಿ ಬೆಳವಣಿಗೆಯನ್ನು 7.8% ರಿಂದ 7% ಗೆ ಇಳಿಸಿದೆ.

Exit mobile version