Site icon Vistara News

Stock Market : ಸತತ ಮೂರನೇ ದಿನ ಸೆನ್ಸೆಕ್ಸ್‌ ಏರಿಕೆ, ಕಳೆದ 6 ದಿನಗಳಿಂದ ಅದಾನಿ ಷೇರುಗಳ ಜಿಗಿತದ ರಹಸ್ಯವೇನು?

Adani stocks

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಸತತ ಮೂರನೇ ದಿನಕ್ಕೆ ಅಂದರೆ ಬುಧವಾರ ಸೆನ್ಸೆಕ್ಸ್‌ 123 ಅಂಕ ಏರಿಕೆ ದಾಖಲಿಸಿ 60,348ಕ್ಕೆ ಸ್ಥಿರವಾಯಿತು. (Stock Market) ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ (nifty) ಕೂಡ 42 ಅಂಕ ಚೇತರಿಸಿಕೊಂಡು 17,754ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಸಬಹುದು ಎಂಬ ಆತಂಕದ ನಡುವೆಯೂ ಸೂಚ್ಯಂಕಗಳು ಏರಿಕೆಯೊಂದಿಗೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದ್ದು ವಿಶೇಷ. ಇಂಡಸ್‌ಇಂಡ್‌ ಬ್ಯಾಂಕ್‌, ಎಂ&ಎಂ, ಎಲ್&ಟಿ, ಎನ್‌ಟಿಪಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್ ಷೇರು ದರ ಶೇ.1 ಚೇತರಿಸಿತು. ‌

ಜಾಗತಿಕ ಮಾರುಕಟ್ಟೆಯಲ್ಲಿ ಅಮರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ, ಹಣದುಬ್ಬರ ಮತ್ತಿತರ ವಿಚಾರಗಳಿಂದ ಅನಿಶ್ಚಿತತೆ ಉಂಟಾಗಿದೆ. ಆದರೆ ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಸೂಚ್ಯಂಕ ಚೇತರಿಸಿರುವುದು ಆಶಾದಾಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಅದಾನಿ ಷೇರುಗಳ ಜಿಗಿತ: ಅದಾನಿ ಸ್ಟಾಕ್ಸ್‌ಗಳ ಪರ ಸಕಾರಾತ್ಮಕ ಸುದ್ದಿಗಳ ನಡುವೆ ಷೇರುಗಳ ದರ ಸತತ 6 ದಿನಗಳಿಂದ ಚೇತರಿಸಿದೆ. ಅದಾನಿ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 6 ದಿನಗಳಲ್ಲಿ 2.2 ಲಕ್ಷ ಕೋಟಿ ರೂ. ಹೆಚ್ಚಳ ದಾಖಲಾಗಿದೆ. ಬುಧವಾರ ಬೆಳಗ್ಗೆ ಅದಾನಿ ಗ್ರೀನ್‌, ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಟ್ರಾನ್ಸ್‌ ಮಿಶನ್‌ ಷೇರುಗಳು 5% ಜಿಗಿದು ಅಪ್ಪರ್‌ ಸರ್ಕ್ಯೂಟ್‌ ಮಿತಿಯನ್ನು ಮುಟ್ಟಿದವು. ಅದಾನಿ ಪವರ್‌ ಷೇರು ದರ 4% ಜಿಗಿಯಿತು. ಅದಾನಿ ಸಮೂಹದ ಎಲ್ಲ 10 ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ರೂ. ದಾಟಿತು.

ಕಾರಣವೇನು?: ಅದಾನಿ ಗ್ರೂಪ್‌ 2025ರ ಏಪ್ರಿಲ್‌ನಲ್ಲಿ ಮೆಚ್ಯೂರಿಟಿ ಆಗುವ ಸಾಲದಲ್ಲಿ 7,374 ಕೋಟಿ ರೂ.ಗಳನ್ನು ಅವಧಿಗೆ ಮುನ್ನ ಮರು ಪಾವತಿಸುವುದಾಗಿ ಮಂಗಳವಾರ ಘೋಷಿಸಿತ್ತು. ಇದು ಸಕಾರಾತ್ಮಕ ಪ್ರಭಾವ ಬೀರಿದೆ. ಅಮೆರಿಕ ಮೂಲದ ಜಿಕ್ಯೂಜಿ ಪಾರ್ಟ್‌ನರ್ಸ್‌ ಅದಾನಿ ಷೇರುಗಳಲ್ಲಿ 15,000 ಕೋಟಿ ರೂ. ಹೂಡಿಕೆ ಮಾಡಿರುವುದು ಅತಿ ದೊಡ್ಡ ಪುಷ್ಟಿ ನೀಡಿದೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುವ ನಿರೀಕ್ಷೆ ಇದೆ. ಅದಾನಿ ಸಮೂಹವು

Exit mobile version