ಮುಂಬೈ: ಷೇರುಪೇಟೆಯಲ್ಲಿ ನಿಫ್ಟಿ ಹಾಗೂ ಸೆನ್ಸೆಕ್ಸ್ ಸತತ ಏರಿಕೆ ಮೂಲಕ ಭಾರಿ ಪ್ರಮಾಣದಲ್ಲಿ ಲಾಭ ಕಂಡಿದ್ದ ಹೂಡಿಕೆದಾರರಿಗೆ ಬುಧವಾರ (ಜುಲೈ 10) ಭಾರಿ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಸೆನ್ಸೆಕ್ಸ್ (Sensex) ಹಾಗೂ ನಿಫ್ಟಿ (Nifty) ಕುಸಿತ ಕಂಡ ಕಾರಣ ಒಂದೇ ದಿನದಲ್ಲಿ ಹೂಡಿಕೆದಾರರಿಗೆ ಸುಮಾರು 7.38 ಲಕ್ಷ ಕೋಟಿ ರೂ. (Share Market Crash) ನಷ್ಟವಾಗಿದೆ. ಸೆನ್ಸೆಕ್ 900 ಪಾಯಿಂಟ್‌ಗಳ ಕುಸಿತದೊಂದಿಗೆ 79,446 ಅಂಕಗಳಿಗೆ ವಹಿವಾಟು ಮುಗಿಸಿತು. ಇನ್ನು ನಿಫ್ಟಿ ಕೂಡ 259 ಪಾಯಿಂಟ್‌ಗಳ ಕುಸಿತದೊಂದಿಗೆ 24,173 ಪಾಯಿಂಟ್‌ಗಳಿಗೆ ವಹಿವಾಟು ಅಂತ್ಯಗೊಂಡಿತು. ಇದರಿಂದ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದರು.
ಬಿಎಸ್‌ಇನಲ್ಲಿ ಸುಮಾರು 208 ಸ್ಟಾಕ್‌ಗಳು ಕಳೆದ 52 ವಾರಗಳಲ್ಲಿಯೇ ಅತಿ ಹೆಚ್ಚು ನಷ್ಟ ಅನುಭವಿಸಿದವು. ಇದರಲ್ಲಿ ಕೇವಲ 21 ಸ್ಟಾಕ್‌ಗಳು ಮಾತ್ರ 52 ವಾರಗಳಲ್ಲಿಯೇ ಗರಿಷ್ಠ ಲಾಭ ಗಳಿಸಿದವು. ಆಟೋಮೊಬೈಲ್, ದುಬಾರಿ ಸರಕು, ಮೆಟಲ್, ತೈಲ ಹಾಗೂ ಗ್ಯಾಸ್ ಷೇರುಗಳು ಗಣನೀಯವಾಗಿ ಕುಸಿತ ಕಂಡವು. ಇದರಿಂದಾಗಿ ಹೂಡಿಕೆದಾರರಿಗೆ ಹಣ ನಷ್ಟವಾಯಿತು. ಷೇರುಪೇಟೆಯಲ್ಲಿ ಹೂಡಿಕೆದಾರರ ನಂಬಿಕೆಯು ನಲುಗಿದ ಕಾರಣ ಹೆಚ್ಚಿನ ಹೂಡಿಕೆದಾರರು ನಷ್ಟ ಅನುಭವಿಸಬೇಕಾಯಿತು ಎಂಬುದಾಗಿ ಮೂಲಗಳು ತಿಳಿಸಿವೆ.
ಬಿಎಸ್‌ಇ ಮಿಡ್‌ಕ್ಯಾಪ್ ಇಂಡೆಕ್ಸ್ ಕೂಡ 678 ಅಂಕಗಳನ್ನು ಕುಸಿತ ಕಂಡುಉ, 46,861 ಪಾಯಿಂಟ್‌ಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿತು. ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಸೂಚ್ಯಂಕದಲ್ಲೂ 909 ಪಾಯಿಂಟ್‌ಗಳ ಕುಸಿತವಾಗಿ, 53,245 ಪಾಯಿಂಟ್‌ಗಳಿಗೆ ದಿನದ ವಹಿವಾಟು ಅಂತ್ಯವಾಯಿತು. ಸೆನ್ಸೆಕ್ಸ್‌ನಲ್ಲಿ ಮಾರುತಿ ಸುಜುಕಿ ಮಾತ್ರ ಶೇ.2ರಷ್ಟು ಲಾಭ ಗಳಿಸಿತು.
“ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಂಬಿಕೆ ನಲುಗಿದ ಕಾರಣ ಷೇರುಪೇಟೆ ಕುಸಿದಿದೆ. ಇದರಿಂದಾಗಿ ಹೂಡಿಕೆದಾರರು ಹೂಡಿಕೆ ಮಾಡುವ ಎಚ್ಚರದಿಂದ ಇರಬೇಕು. ಸ್ಮಾಲ್ ಕ್ಯಾಪ್ ಹೂಡಿಕೆದಾರರು ಇನ್ನೂ ಎಚ್ಚರದಿಂದ ಇರಬೇಕು. ಕಡಿಮೆ ಬೆಲೆಗೆ ಷೇರುಗಳನ್ನು ಆಫರ್ ಮಾಡಲಾಗುತ್ತಿರುವ ಕುರಿತು ಶಂಕೆಗಳು ವ್ಯಕ್ತವಾಗಿವೆ. ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಬೇಕು” ಎಂಬುದಾಗಿ ಷೇರುಪೇಟೆ ತಜ್ಞರು ಎಚ್ಚರಿಸಿದ್ದಾರೆ.
ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ ಏರಿಕೆ?
ಸದ್ಯ, ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲೂ 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್ ಇದೆ. ಇದನ್ನು, 70 ಸಾವಿರ ರೂ.ಗೆ ಏರಿಕೆ ಮಾಡಿದರೆ, ಸಂಬಳದಾರರು ಹೆಚ್ಚಿನ ತೆರಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಹಣದುಬ್ಬರ ಏರಿಕೆ ಸೇರಿ ಹಲವು ಕಾರಣಗಳಿಂದಾಗಿ ಸ್ಟಾಂಡರ್ಡ್ ಡಿಡಕ್ಷನ್ ಅಥವಾ ತೆರಿಗೆ ವಿನಾಯಿತಿ ಮೊತ್ತವನ್ನು ಏರಿಕೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಹಾಗಾಗಿ, ಮೊತ್ತವನ್ನು 70 ಸಾವಿರ ರೂ.ಗೆ ಏರಿಕೆ ಮಾಡಲು ನಿರ್ಮಲಾ ಸೀತಾರಾಮನ್ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ.
ಇದನ್ನೂ ಓದಿ: Rahul Gandhi: ಷೇರುಪೇಟೆಯಲ್ಲಿ ಭಾರಿ ಹಗರಣವಾಗಿದೆ ಎಂದಿದ್ದ ರಾಹುಲ್ ಗಾಂಧಿಗೆ ಐದೇ ದಿನದಲ್ಲಿ 25 ಲಕ್ಷ ರೂ. ಲಾಭ!