ನವ ದೆಹಲಿ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ವರ್ಷ 1.1 ಕೋಟಿ ಚದರ ಅಡಿಗಳಷ್ಟು ಪ್ರದೇಶದಲ್ಲಿ ಶಾಪಿಂಗ್ ಮಾಲ್‌ಗಳು ಅಭಿವೃದ್ಧಿಯಾಗಲಿದೆ. ಅಂದರೆ 145ಕ್ಕೂ ಹೆಚ್ಚು ಫುಟ್ಬಾಲ್ ಮೈದಾನಗಳ ಗಾತ್ರಕ್ಕೆ ಸಮವಾಗುತ್ತದೆ ಎಂದು ವರದಿ ತಿಳಿಸಿದೆ. (Shopping Malls) ಕೋವಿಡ್ ಬಿಕ್ಕಟ್ಟಿನ ಬ್ರೇಕ್ ಬಳಿಕ ದೇಶದಲ್ಲಿ ಶಾಪಿಂಗ್ ಮಾಲ್‌ಗಳ ನಿರ್ಮಾಣ ಯೋಜನೆಗಳು ಚುರುಕಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಒಟ್ಟಾಗಿ ನಿರ್ಮಾಣವಾಗಿರುವುದಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ 2023ರಲ್ಲಿ ಶಾಪಿಂಗ್ ಮಾಲ್‌ಗಳು ನಿರ್ಮಾಣವಾಗಲಿರುವುದು ಗಮನಾರ್ಹ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್ ಅನಾರಾಕ್ ಮತ್ತು ರಿಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ವರದಿ ತಿಳಿಸಿದೆ.
೨೦೨೨ರಲ್ಲಿ ರಿಟೇಲ್ ಇಂಡಸ್ಟ್ರಿ ಚೇತರಿಸಿದ್ದುಮ, 2023ರಲ್ಲಿ ಮತ್ತಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ. ಎನ್‌ಸಿಆರ್ ಮತ್ತು ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತಾ, ಮುಂಬಯಿ, ಎಂಎಂಆರ್ ವ್ಯಾಪ್ತಿಯಲ್ಲಿ ಶಾಪಿಂಗ್ ಮಾಲ್‌ಗಳ ಸಂಖ್ಯೆ ಗಣನೀಯ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.