Site icon Vistara News

Signature Bank : ಅಮೆರಿಕದಲ್ಲಿ 48 ಗಂಟೆಗಳಲ್ಲಿ ಎರಡನೇ ಪ್ರಮುಖ ಬ್ಯಾಂಕ್‌ ದಿವಾಳಿ, ಮುಂದಿನ ಸರದಿ ಯಾವುದು?

signature bank

ವಾಷಿಂಗ್ಟನ್:‌ ಅಮೆರಿಕದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಎರಡನೇ ಬ್ಯಾಂಕ್‌ ದಿವಾಳಿಯಾಗಿದೆ. ಇದರೊಂದಿಗೆ ಅಲ್ಲಿನ ಬ್ಯಾಂಕಿಂಗ್‌ ವಲಯ ಆತಂಕಕ್ಕೀಡಾಗಿದೆ. ತಂತ್ರಜ್ಞಾನ ಕ್ಷೇತ್ರ ಮತ್ತು ಕ್ರಿಪ್ಟೊ ಕರೆನ್ಸ್‌ ಉದ್ದಿಮೆಯ ಅಭಿವೃದ್ಧಿಯಲ್ಲಿ ಈ ಬ್ಯಾಂಕ್‌ಗಳು ಮಹತ್ತರ ಪಾತ್ರ ವಹಿಸಿತ್ತು. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಪತನವಾದ ಬಳಿಕ ಸಿಗ್ನೇಚರ್‌ ಬ್ಯಾಂಕ್‌ (Signatutre Bank) ದಿವಾಳಿಯಾಗಿದೆ. ಫೆಡರಲ್‌ ಡಿಪಾಸಿಟ್‌ ಇನ್ಷೂರೆನ್ಸ್‌ ಕಾರ್ಪೊರೇಷನ್‌ (FDIC) ಸಿಗ್ನೇಚರ್‌ ಬ್ಯಾಂಕ್‌ನ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಯ ಸಂದರ್ಭ ಎರಡು ಬ್ಯಾಂಕ್‌ಗಳ ಪತನ ಆತಂಕಕ್ಕೆ ಕಾರಣವಾಗಿದೆ.

ಸಿಗ್ನೇಚರ್‌ ಬ್ಯಾಂಕ್‌ 110 ಶತಕೋಟಿ ಡಾಲರ್‌ ಆಸ್ತಿ (ಅಂದಾಜು 9.04 ಲಕ್ಷ ಕೋಟಿ ರೂ.) ಆಸ್ತಿಯನ್ನು ಮತ್ತು 88.59 ಶತಕೋಟಿ ಡಾಲರ್‌ ( 7.26 ಲಕ್ಷ ಕೋಟಿ ರೂ.) ಠೇವಣಿಯನ್ನು ಒಳಗೊಂಡಿದೆ. ಈ ಎರಡೂ ಬ್ಯಾಂಕ್‌ಗಳಲ್ಲಿರುವ ಠೇವಣಿಗಳು ಸುರಕ್ಷಿತವಾಗಿದ್ದು, ಇದಕ್ಕಾಗಿ ಸರ್ಕಾರವು ತೆರಿಗೆದಾರರ ಹಣವನ್ನು ಕೊಡುವುದಿಲ್ಲ ಎಂದು ಅಮೆರಿಕದ ಹಣಕಾಸು ಇಲಾಖೆ ತಿಳಿಸಿದೆ.

ಸಿಗ್ನೇಚರ್‌ ಬ್ಯಾಂಕ್‌ ದಿವಾಳಿಯಾಗಿದ್ದೇಕೆ?

‌ಅಮೆರಿಕದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲ ಕೊಡುತ್ತಿದ್ದ ಸಿಲಿಕಾನ್‌ ವ್ಯಾಲಿ ಬ್ಯಾಂಕ್ ದಿವಾಳಿಯಾದ (Silicon Valley Bank) ಬೆನ್ನಲ್ಲೇ, ಸಿಗ್ನೇಚರ್‌ ಬ್ಯಾಂಕ್‌ನಿಂದಲೂ ಗ್ರಾಹಕರು ಏಕಾಏಕಿ ತಮ್ಮ ಠೇವಣಿಗಳನ್ನು ಹಿಂತೆಗೆದುಕೊಂಡರು. ಇದರ ಪರಿಣಾಮ ಬ್ಯಾಂಕ್‌ ವಹಿವಾಟು ಕುಸಿದು ದಿವಾಳಿಯಾಗಿದೆ.

Exit mobile version