Site icon Vistara News

Silver price hike : ಬೆಳ್ಳಿಯ ದರ ಕೆ.ಜಿಗೆ 90,000 ರೂ.ಗೆ ಜಿಗಿಯುವ ನಿರೀಕ್ಷೆ, ಕಾರಣವೇನು?

silver

#image_title

ಮುಂಬಯಿ: ಇದುವರೆಗೆ ಬಂಗಾರದಲ್ಲಿ ಹೂಡಿಕೆಯನ್ನು ಮಾಡುತ್ತಿದ್ದವರು ಇದೀಗ ತಮ್ಮ ಖಾತೆಗೆ ಬೆಳ್ಳಿಯನ್ನೂ ಸೇರಿಸುತ್ತಿದ್ದಾರೆ. ಇದಕ್ಕೆ ಕಾರಣ ಬೆಳ್ಳಿಯ ದರ ಜಿಗಿತ. ಹಲವಾರು ಉದ್ದಿಮೆಗಳಲ್ಲಿ ಇದಿಗ ಬೆಳ್ಳಿಗೆ ಬೇಡಿಕೆ ಇದೆ. ಇದರ ಪರಿಣಾಮ ರಜತ ಲೋಹದ ಬೆಲೆ ಏರುತ್ತಿದೆ ಎನ್ನುತ್ತಾರೆ (Silver price hike) ಹಣಕಾಸು ತಜ್ಞರು. ಬೆಂಗಳೂರಿನಲ್ಲಿ ಸೋಮವಾರ ಪ್ರತಿ ಕೆ.ಜಿ ಬೆಳ್ಳಿಯ ದರ 80,400 ರೂ. ಇತ್ತು. ಇದು ಶೀಘ್ರದಲ್ಲಿಯೇ 90,000 ರೂ.ಗೆ ಏರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

2023ರಲ್ಲಿ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಇದುವರೆಗೆ 11% ಏರಿಕೆಯಾಗಿದೆ. ಆದರೆ ಬೆಳ್ಳಿಯ ದರ ಏರಿಕೆ ನಿರಂತರ ಉಳಿದುಕೊಳ್ಳಲಿದೆ. ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬರುತ್ತಿರುವುದು ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಮುಂದಿನ 8-9 ತಿಂಗಳುಗಳಲ್ಲಿ ಬೆಳ್ಳಿಯ ದರ ಪ್ರತಿ ಕೆ.ಜಿಗೆ 85-90 ಸಾವಿರ ರೂ.ಗೆ ವೃದ್ಧಿಸಬಹುದು. ಅಂದರೆ ಈಗಿನ ಮಟ್ಟದಿಂದ 20% ಹೆಚ್ಚಳವಾಗಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಚಿನ್ನ-ಬೆಳ್ಳಿಯ ದರ ಏರಿಕೆಯ ಅನುಪಾತವನ್ನು ಹೋಲಿಸಿದರೆ ಬೆಳ್ಳಿಯು ದರ ಏರಿಕೆಯ ವೇಗದಲ್ಲಿ ಚಿನ್ನವನ್ನು ಮೀರಿಸಬಹುದು ಎನ್ನುತ್ತಾರೆ ಕೋಟಕ್‌ ಸೆಕ್ಯುರಿಟೀಸ್‌ನ ರವೀಂದ್ರ ರಾವ್.‌

9000 ಟನ್‌ ಬೆಳ್ಳಿಯ ಆಮದು:

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಬೆಳ್ಳಿಯನ್ನು ಆಮದು ಮಾಡುವ ದೇಶ. 90% ಬೇಡಿಕೆಯನ್ನು ಆಮದು ಮೂಲಕವೇ ಭರಿಸಲಾಗುತ್ತದೆ. 2022ರಲ್ಲಿ ಭಾರತವು 9,000 ಟನ್‌ ಬೆಳ್ಳಿಯನ್ನು ಆಮದು ಮಾಡಿಕೊಂಡಿತ್ತು. ಪೂರೈಕೆ ಕಡಿಮೆಯಾಗುತ್ತಿರುವುದರಿಂದ ದರ ಮತ್ತಷ್ಟು ಏರುಗತಿಯಲ್ಲಿ ಮುಂದುವರಿಯಬಹುದು ಎನ್ನುತ್ತಾರೆ ತಜ್ಞರು.

5 ಜಿ ತಂತ್ರಜ್ಞಾನದಲ್ಲಿ ಬೆಳ್ಳಿಯ ಬಳಕೆ:

ಭಾರತದಲ್ಲಿ 5ಜಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇಲ್ಲಿ ಬೆಳ್ಳಿಯ ಅಗತ್ಯ ಉಂಟಾಗಿದೆ. ನಾನಾ ಎಲೆಕ್ಟ್ರಿಕ್‌ ವಾಹನಗಳಿಗೂ ಬೆಳ್ಳಿ ಬೇಕಾಗುತ್ತದೆ. ನವೀಕರಿಸಬಹುದಾದ ಇಂಧನ ವಲಯದಲ್ಲೂ ಬೆಳ್ಳಿಯ ಅಗತ್ಯ ಉಂಟಾಗಿದೆ ಎನ್ನುತ್ತಾರೆ ತಜ್ಞರು.

Exit mobile version