ಮ್ಯೂಚುವಲ್ ಫಂಡ್ ಸಲಹೆಗಾರರು ತಮ್ಮ ಗ್ರಾಹಕರಿಗೆ ಸ್ಮಾಲ್ ಕ್ಯಾಪ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು ಹೇಳುವುದು ಸಾಮಾನ್ಯ. ಕಳೆದ ಮೂರು ತಿಂಗಳಿನಿಂದ ಸ್ಮಾಲ್ ಕ್ಯಾಪ್ ಸ್ಕೀಮ್‌ಗಳು ಸಾಕಷ್ಟು ಗಳಿಕೆಯನ್ನು ದಾಖಲಿಸಿವೆ. (Mutual fund schemes) ಕಳೆದ ಮೂರು ತಿಂಗಳುಗಳಲ್ಲಿ ಸ್ಮಾಲ್ ಕ್ಯಾಪ್ ಕೆಟಗರಿ 18% ರಿಟರ್ನ್ಸ್ ಅನ್ನು ನೀಡಿವೆ. ವರ್ಷಕ್ಕೆ 22% ರಿಟರ್ನ್ಸ್ ಕೊಟ್ಟಿವೆ.
ಹಾಗಾದರೆ ಏನಿದು ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ಸ್ ಎನ್ನುತ್ತೀರಾ? ಇವುಗಳು ಸಣ್ಣ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಮಾರುಕಟ್ಟೆ ಬಂಡವಾಳ ದೃಷ್ಟಿಯಿಂದ ಟಾಪ್ 250ಕ್ಕಿಂತ ಕೆಳಗಿನ ರ‍್ಯಾಂಕ್‌ನಲ್ಲಿ ಇರುತ್ತವೆ. ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ (stock market) ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಲ್ಲಿ ಕನಿಷ್ಠ 65%ರಷ್ಟು ಹೂಡಿಕೆ ಮಾಡುತ್ತವೆ.
ಭಾರಿ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಹೋಲಿಸಿದರೆ, ಸಣ್ಣ ಕಂಪನಿಗಳು ಹಲವಾರು ಏರಿಳಿತಗಳನ್ನು ಕಾಣುತ್ತವೆ. ಹೀಗಾಗಿ ಸ್ಮಾಲ್ ಕ್ಯಾಪ್ ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ಅಪಾಯಕಾರಿ ಎನ್ನಿಸುತ್ತದೆ. ಹೀಗಾಗಿ ಅಗ್ರೆಸ್ಸಿವ್ ಹೂಡಿಕೆದಾರರಿಗೆ ಸ್ಮಾಲ್ ಕ್ಯಾಪ್ ಅನ್ನು ಶಿಫಾರಸು ಮಾಡಲಾಗುತ್ತದೆ. ಹಾಗಾದರೆ ರಿಸ್ಕ್ ಹೆಚ್ಚು ಇರುವ ಸ್ಮಾಲ್ ಕ್ಯಾಪ್ ಸ್ಕೀಮ್‌ಗಳಲ್ಲಿ ಜನ ಯಾಕೆ ಹೂಡಿಕೆ ಮಾಡುತ್ತಾರೆ ಎಂದು ಅಚ್ಚರಿ ಆಗುತ್ತಿದೆಯೇ?
ಏಕೆಂದರೆ ದೀರ್ಘಾವಧಿಗೆ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೆಚ್ಚು ರಿಟರ್ನ್ ಕೊಡುವ ಸಾಧ್ಯತೆಗಳು ಹೆಚ್ಚು. ಉದಾಹರಣೆಗೆ 10 ವರ್ಷಗಳಲ್ಲಿ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ 19% ಕ್ಕೂ ಹೆಚ್ಚು ಆದಾಯ ಕೊಟ್ಟಿದೆ. ಆದರೆ ಸ್ಮಾಲ್ ಕ್ಯಾಪ್ ಸೆಗ್ಮೆಂಟ್‌ನಲ್ಲಿ ವಿನ್ನರ್ ಯಾರು ಎಂಬುದನ್ನು ಅಂದಾಜಿಸುವುದು ಕಷ್ಟ. ಹಲವು ಕಂಪನಿಗಳು ಗೊತ್ತಿರುವುದಿಲ್ಲ. ಅವುಗಳ ಬಗ್ಗೆ ಅಧ್ಯಯನ ನಡೆದಿರುವುದಿಲ್ಲ. ಹೀಗಾಗಿ ಸ್ಮಾಲ್ ಕ್ಯಾಪ್‌ಗಳಲ್ಲಿ ಹೂಡಿಕೆ ಎಂದರೆ ಮಕ್ಕಳಾಟಿಕೆಯಲ್ಲ. ಮಾರುಕಟ್ಟೆ ಕುಸಿತವಾಗಿದ್ದಾಗ ಈ ಫಂಡ್‌ಗಳ ಚಲನವಲನಗಳ ಬಗ್ಗೆ ಗ್ರಾಹಕರು ಗಮನಿಸಬೇಕು.
ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರ ಲಾಭವೇನೆಂದರೆ, ಭವಿಷ್ಯದಲ್ಲಿದ ಈ ಕಂಪನಿಗಳು ಬಹಳ ಬೆಳವಣಿಗೆ ಹೊಂದುವ ಸಾಧ್ಯತೆ ಇರುತ್ತದೆ. ಆಗ ಹೆಚ್ಚು ಲಾಭ ಸಿಗುತ್ತದೆ. ಆದರೆ ದಿನ ನಿತ್ಯದ ವಹಿವಾಟಿನಲ್ಲಿ ಅಂಥ ಕಂಪನಿಗಳ ಬಗ್ಗೆ ಹೆಚ್ಚು ಕೇಳಿರಲಾರರಿ. 7 ವರ್ಷಗಳ ಅವಧಿಗೆ ಇವುಗಳಲ್ಲಿ ಹೂಡುವುದು ಸೂಕ್ತ. ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಕಳೆದ 5 ವರ್ಷಗಳಲ್ಲಿ 41% ರಿಟರ್ನ್ ಕೊಟ್ಟಿದೆ. ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ 33% ರಿಟರ್ನ್ ನೀಡಿದೆ.
ನೀವು 2023ರಲ್ಲಿ ಹೂಡಿಕೆಗೆ ಪರಿಶೀಲಿಸಬಹುದಾದ ಬೆಸ್ಟ್ ಸ್ಮಾಲ್ ಕ್ಯಾಪ್ ಫಂಡ್‌ಗಳು ಇಂತಿವೆ:
ಎಕ್ಸಿಸ್ ಸ್ಮಾಲ್ ಕ್ಯಾಪ್ ಫಂಡ್
ಎಸ್‌ಬಿಐ ಸ್ಮಾಲ್ ಕ್ಯಾಪ್ ಫಂಡ್
ಕೋಟಕ್ ಸ್ಮಾಲ್ ಕ್ಯಾಪ್ ಫಂಡ್
ನಿಪ್ಪೊನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್