Site icon Vistara News

Gold Price | ಬಂಗಾರದ ದರದಲ್ಲಿ ಅಲ್ಪ ಏರಿಕೆ, ಬೆಳ್ಳಿ, ಪ್ಲಾಟಿನಮ್‌ ದರ ಯಥಾಸ್ಥಿತಿ

gold bond

ಬೆಂಗಳೂರು: ಬಂಗಾರದ ದರದಲ್ಲಿ ಬುಧವಾರ 10 ರೂ. (Gold price) ಏರಿಕೆಯಾಗಿದೆ. ಬೆಳ್ಳಿ ಮತ್ತು ಪ್ಲಾಟಿನಮ್‌ ದರ ಯಥಾಸ್ಥಿತಿಯಲ್ಲಿ ಇತ್ತು.

ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರದಲ್ಲಿ 10 ರೂ. ವೃದ್ಧಿಸಿದ್ದು, 10 ಗ್ರಾಮ್‌ಗೆ 53,030 ರೂ.ಗೆ ವೃದ್ಧಿಸಿದೆ. ೨೨ ಕ್ಯಾರಟ್‌ ಅಥವಾ ಆಭರಣ ಚಿನ್ನದ ದರದಲ್ಲಿ ಹತ್ತು ರೂ, ವೃದ್ಧಿಸಿದ್ದು, 48,610 ರೂ. ಇತ್ತು. ಒಂದು ಕೆ.ಜಿ ಬೆಳ್ಳಿಯ ದರ 67,500 ರೂ.ನಷ್ಟು ಇತ್ತು.

ಅಂತಾರಾಷ್ಟ್ರೀಯ ದರವನ್ನು ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಏರಿಳಿತಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಕುಸಿತಕ್ಕೀಡಾದಾಗ, ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿದ್ದಾಗ, ಬಾಂಡ್‌ ಆದಾಯ ಇಳಿದಾಗ, ಹಣದುಬ್ಬರ ಹೆಚ್ಚಳವಾದಾಗ ಹೂಡಿಕೆದಾರರು ಚಿನ್ನದಲ್ಲಿ ಸುರಕ್ಷಿತ ಹೂಡಿಕೆ ಮಾಡುತ್ತಾರೆ.

Exit mobile version