ನವ ದೆಹಲಿ: ಸ್ಥಳೀಯ ಬ್ರಾಂಡ್‌ಗಳ ನೆರವಿನೊಂದಿಗೆ ಭಾರತವು ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ ವಾಚ್ ಮಾರುಕಟ್ಟೆಯಾಗಿ (Smartwatch Market) ಇದೀಗ ಹೊರಹೊಮ್ಮಿದೆ.
ಕೈಗೆಟಕುವ ದರದಲ್ಲಿ ಸ್ಮಾರ್ಟ್ ವಾಚ್‌ಗಳ ಉತ್ಪಾದನೆಗೆ ಭಾರತ ಹೆಸರುವಾಸಿಯಾಗಿದೆ. ಹಬ್ಬಗಳ ಸಂದರ್ಭದಲ್ಲೂ ಅತಿ ಹೆಚ್ಚು ಮಾರಾಟವಾಗುವ ಉತ್ಪನ್ನಗಳಲ್ಲಿ ಸ್ಮಾರ್ಟ್ ವಾಚ್ ಕೂಡ ಒಂದಾಗಿದೆ. ಈ ಮಾರುಕಟ್ಟೆಯಲ್ಲಿ ಭಾರತವು ಉತ್ತರ ಅಮೆರಿಕ, ಚೀನಾವನ್ನೂ ಹಿಂದಿಕ್ಕಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮೊದಲ ಸ್ಥಾನ ಗಳಿಸಿದೆ.
ಸ್ಮಾರ್ಟ್ ಫೋನ್‌ನಲ್ಲಿ ಚೀನಾ ಕಂಪನಿಗಳ ಪ್ರಾಬಲ್ಯ ಇದ್ದರೆ, ಸ್ಮಾರ್ಟ್ ವಾಚ್‌ಗಳ ಉತ್ಪಾದನೆಯಲ್ಲಿ ಭಾರತದ ಕಂಪನಿಗಳು ಮುಂಚೂಣಿಗೆ ಬಂದಿವೆ. 2022ರ ಜುಲೈ-ಸೆಪ್ಟೆಂಬರ್‌ನಲ್ಲಿ ಜಾಗತಿಕ ಸ್ಮಾರ್ಟ್ ವಾಚ್ ಮಾರುಕಟ್ಟೆಯ 30% ಪಾಲನ್ನು ಭಾರತ ತನ್ನದಾಗಿಸಿದೆ.