Site icon Vistara News

Social media influencer : ವರ್ಷಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಗಳಿಸುವ ಯೂಟ್ಯೂಬರ್‌ಗೆ ಟ್ಯಾಕ್ಸ್‌ ಗ್ಯಾರಂಟಿ

Social media influencer

ನವ ದೆಹಲಿ: ನೀವು ಯೂಟ್ಯೂಬ್‌ನಲ್ಲಿ ನಿಮ್ಮ ಚಾನೆಲ್‌ ನಡೆಸುತ್ತಿದ್ದೀರಾ? ಅಥವಾ ಬೇರೆ ಯಾವುದಾದರೂ ಸಾಮಾಜಿಕ ಜಾಲತಾಣದಲ್ಲಿ (Social media influencer) ವಿಡಿಯೊಗಳನ್ನು ಪೋಸ್ಟ್‌ ಮಾಡುವುದಲ್ಲದೆ ಅದರ ಮೂಲಕ ವರ್ಷಕ್ಕೆ 2 ಲಕ್ಷ ರೂ.ಗಿಂತ ಹೆಚ್ಚು ಹಣ ಗಳಿಸುತ್ತಿದ್ದೀರಾ? ಹಾಗಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ಮೇಲೆ ಕಣ್ಣಿಡಬಹುದು. ನೋಟಿಸ್‌ ಕಳಿಸಬಹುದು. (Income tax return) ಆದಾಯ ತೆರಿಗೆ ಕಟ್ಟಲು ಸೂಚಿಸಬಹುದು.

ನಿಮ್ಮ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳೂ, ವಿಡಿಯೊಗಳೂ ಆದಾಯ ತೆರಿಗೆ ಇಲಾಖೆಗೆ ಕೆಲವು ಸುಳಿವುಗಳನ್ನು ನೀಡಬಹುದು. ಸಿಎ ಕ್ಲಬ್‌ ಆಫ್‌ ಇಂಡಿಯಾದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ 15 ಮಂದಿ ಸಾಮಾಜಿಕ ಜಾಲತಾಣ ಪ್ರಭಾವಿಗಳಿಗೆ ಐಟಿ ಇಲಾಖೆ ನೋಟಿಸ್‌ ಜಾರಿಗೊಳಿಸಿದೆ. ಕೆಲವು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ತಮ್ಮ ಭರ್ಜರಿ ಶಾಪಿಂಗ್‌, ವಿದೇಶಿ ಪ್ರವಾಸಗಳನ್ನು ಜಾಲತಾಣಗಳಲ್ಲಿ ವಿಡಿಯೊ ಮೂಲಕ ತೋರಿಸಿದ್ದರು. ಆದರೆ ಕಡಿಮೆ ಟ್ಯಾಕ್ಸ್‌ ಕಟ್ಟಿರುವುದು ಐಟಿ ಇಲಾಖೆ ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿ ನೋಟಿಸ್‌ ಕಳಿಸಿತ್ತು.

ಇದನ್ನೂ ಓದಿ: New vs old tax regime : 2023-24ರಲ್ಲಿ ಸಂಬಳದ ಮೇಲಿನ ಟಿಡಿಎಸ್‌ಗೆ ಯಾವ ಆದಾಯ ತೆರಿಗೆ ಪದ್ಧತಿ ಸೂಕ್ತ?

ಆದಾಯ ತೆರಿಗೆ ಇಲಾಖೆಯು ಡೇಟಾ ಅನಾಲಿಟಿಕ್ಸ್‌ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿಗಳಾಗಿರುವವರ ಅಕೌಂಟ್‌ಗಳನ್ನು ಪರಿಶೀಲಿಸುತ್ತದೆ. ಅವರ ಸಾಮಾಜಿಕ ಸ್ಥಿತಿಗತಿಗೂ ಐಟಿಆರ್‌ ವಿವರಗಳಿಗೂ ಹೊಂದಾಣಿಕೆ ಆಗದಿದ್ದರೆ ನೋಟಿಸ್‌ ಕಳಿಸುತ್ತದೆ. ಬಾಲಿವುಡ್‌, ಫ್ಯಾಷನ್‌, ಲೈಫ್‌ಸ್ಟೈಲ್‌, ಟ್ರಾವೆಲ್‌ ಇತ್ಯಾದಿ ನಾನಾ ವಲಯಗಳ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಪ್ರಭಾವಿಗಳಾಗಿರುವವರ ಮೇಲೆ ಇಲಾಖೆ ಕಣ್ಣಿಟ್ಟಿದೆ. ಪ್ರಾಯೋಜಿಕ ಕಂಟೆಂಟ್‌, ಬ್ರಾಂಡ್‌ ಎಂಡೋರ್ಸ್‌ಮೆಟ್‌ ಇದೆಯೇ ಎಂಬುದನ್ನು ಗಮನಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಫ್ಲುಯೆನ್ಸರ್‌ಗಳ ಬಗ್ಗೆ ಕೆಲವು ತೆರಿಗೆ ನಿಯಮಗಳನ್ನು ಇಲಾಖೆ ಅನ್ವಯಿಸಿದೆ. ಅದು ಇಂತಿದೆ.

  1. ಆದಾಯ ತೆರಿಗೆ ನಿಯಮಗಳು ವಾರ್ಷಿಕ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವ ಎಲ್ಲ ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳಿಗೆ ಅನ್ವಯವಾಗುತ್ತದೆ.
  2. ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಅದರ ಮೂಲಕ ವಾರ್ಷಿಕ 2 ಲಕ್ಷ ರೂ.ಗೂ ಹೆಚ್ಚು ಆದಾಯವನ್ನು ಜಾಲತಾಣಗಳಿಂದ ಗಳಿಸಿದರೆ ಅದಕ್ಕೆ 30% ತೆರಿಗೆಯ ಶ್ರೇಣಿ ಅನ್ವಯವಾಗಲಿದೆ.
  3. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ತಮ್ಮ ಸಲಕರಣೆಗಳ ಖರೀದಿ, ಪ್ರಯಾಣಗಳ ವೆಚ್ಚಕ್ಕೆ ತೆರಿಗೆ ಕಡಿತ ಕ್ಲೇಮ್‌ ಮಾಡಬಹುದು.
  4. 2023ರ ಏಪ್ರಿಲ್‌ 1ರಿಂದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ನೂತನ ಆದಾಯ ತೆರಿಗೆ ನಿಯಮ ಅನ್ವಯವಾಗುತ್ತದೆ.

Exit mobile version