Site icon Vistara News

Sovereign Gold Bond | ಇಂದಿನಿಂದ ಆಗಸ್ಟ್‌ 26 ತನಕ ಖರೀದಿಗೆ ಅವಕಾಶ

gold

ನವ ದೆಹಲಿ: ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ತನ್ನ ಎರಡನೇ ಹಂತದ ಸಾವರಿನ್‌ ಗೋಲ್ಡ್‌ ಬಾಂಡ್‌ (Sovereign Gold Bond) ಅನ್ನು ಬಿಡುಗಡೆಗೊಳಿಸಿದೆ. ಆಗಸ್ಟ್‌ ೨೨ರಿಂದ ಆಗಸ್ಟ್‌ ೨೬ರ ತನಕ ಖರೀದಿಗೆ ಅವಕಾಶ ಇದೆ.

ಯಾರು ಎಲ್ಲಿ ಖರೀದಿಸಬಹುದು? ಭಾರತೀಯ ನಾಗರಿಕರು, ಟ್ರಸ್ಟ್‌ಗಳು ಸಾವರಿನ್‌ ಗೋಲ್ಡ್‌ ಬಾಂಡ್‌ ಅನ್ನು ಖರೀದಿಸಬಹುದು. ಬ್ಯಾಂಕ್‌ಗಳು (ಕಿರು ಹಣಕಾಸು ಮತ್ತು ಪೇಮೆಂಟ್‌ ಬ್ಯಾಂಕ್‌ ಹೊರತುಪಡಿಸಿ), ನಿರ್ದಿಷ್ಟ ಅಂಚೆ ಕಚೇರಿಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (SHCIL), ಕ್ಲಿಯರಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (CCIL), ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (NSE), ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಮೂಲಕ ಗೋಲ್ಡ್‌ ಬಾಂಡ್‌ ಅನ್ನು ಖರೀದಿಸಬಹುದು.

ಪ್ರತಿ ಗ್ರಾಮ್‌ ಚಿನ್ನಕ್ಕೆ ೫,೧೯೭ ರೂ. ದರವನ್ನು ಗೋಲ್ಡ್‌ ಬಾಂಡ್‌ನಲ್ಲಿ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಮೂಲಕ ಖರೀದಿಸುವವರಿಗೆ ಪ್ರತಿ ಗ್ರಾಮ್‌ಗೆ ೫೦ ರೂ. ಡಿಸ್ಕೌಂಟ್‌ ಸಿಗಲಿದೆ. ವೈಯಕ್ತಿಕವಾಗಿ ಗರಿಷ್ಠ ೪ ಕೆ.ಜಿ ಕೊಳ್ಳಬಹುದು. ಟ್ರಸ್ಟ್‌ಗಳು ೨೦ ಕೆ.ಜಿ ಖರೀದಿಸಬಹುದು. ಈ ಗೋಲ್ಡ್‌ ಬಾಂಡ್‌ನ ಅವಧಿ ೮ ವರ್ಷ.

ಇದನ್ನೂ ಓದಿ:ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!

Exit mobile version