ಮುಂಬಯಿ: ದಿಲ್ಲಿಯಿಂದ ಮುಂಬಯಿಗೆ ಹಾರಾಟ ನಡೆಸುತ್ತಿದ್ದ ಸ್ಪೈಸ್‌ಜೆಟ್ (SpiceJet) ಬೋಯಿಂಗ್ ೭೩೭-೮೦೦ ವಿಮಾನವು ಮುಂಬಯಿನಲ್ಲಿ ಭೂಸ್ಪರ್ಶದ ಸಂದರ್ಭದಲ್ಲಿ ಅದರ ಟೈರ್ ಸ್ಫೋಟಿಸಿದ ಅವಘಡ ಸೋಮವಾರ ಸಂಜೆ ಸಂಭವಿಸಿದೆ. ಹೀಗಿದ್ದರೂ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬಂದಿಗೆ ಯಾವುದೇ ತೊಂದರೆಯಾಗಿಲ್ಲ.
ಸ್ಪೈಸ್‌ಜೆಟ್‌ನ ಎಸ್‌ಜಿ-೮೭೦೧ ವಿಮಾನವು ದಿಲ್ಲಿಯಿಂದ ಹೊರಟು ಮುಂಬಯಿ ವಿಮಾನ ನಿಲ್ದಾಣದ ರನ್‌ವೇ ೨೭ರಲ್ಲಿ ಸುರಕ್ಷಿತವಾಗಿ ಇಳಿಯಿತು. ಬಳಿಕ ವಿಮಾನವನ್ನು ರನ್‌ವೇಯಿಂದ ತೆರವುಗೊಳಿಸಲಾಯಿತು.
ಲ್ಯಾಂಡಿಂಗ್ ವೇಳೆ ವಿಮಾನದ ಕ್ಯಾಪ್ಟನ್‌ಗೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಹೊಗೆ ಅಥವಾ ಬೆಂಕಿ ಕಾಣಿಸಲಿಲ್ಲ. ಆದರೆ ಭೂಸ್ಪರ್ಶದ ಬಳಿಕ ಟೈರ್ ಒಡೆದು ಹೋಗಿರುವುದು ಬಂದಿತು. ಸ್ಪೈಸ್‌ಜೆಟ್‌ನಲ್ಲಿ ಪದೇಪದೆ ತಾಂತ್ರಿಕ ದೋಷಗಳು ಕಾಣಿಸಿದ್ದರಿಂದ ಇತ್ತೀಚೆಗೆ ವಿಮಾನಯಾನ ನಿರ್ದೇಶನಾಲಯವು ೫೦% ವಿಮಾನಗಳ ಹಾರಾಟವನ್ನು ೮ ವಾರಗಳ ಕಾಲ ಹಾರಾಟ ನಡೆಸದಂತೆ ನಿರ್ಬಂಧಿಸಿತ್ತು.
ಇದನ್ನೂ ಓದಿ:ಸ್ಪೈಸ್‌ಜೆಟ್ ವಿಮಾನ ಹಾರಾಟವನ್ನು 50% ಕಡಿತಗೊಳಿಸಿ ಡಿಜಿಸಿಎ ಆದೇಶ