Site icon Vistara News

Currency Notes : ಈ ಮಾರ್ಕ್‌ ಇರುವ ಕರೆನ್ಸಿ ನೋಟುಗಳು ನಕಲಿ ಅಲ್ಲ: ಆರ್‌ಬಿಐ

RBI Note

ಮುಂಬಯಿ: ಸ್ಟಾರ್‌ ಮಾರ್ಕ್‌ (*) ಇರುವ ನೋಟುಗಳು ಕಾನೂನು ಮಾನ್ಯತೆ ಹೊಂದಿವೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India-RBI) ಶುಕ್ರವಾರ ಸ್ಪಷ್ಟಪಡಿಸಿದೆ. ನೋಟಿನ ನಂಬರ್‌ ಪ್ಯಾನೆಲ್‌ನಲ್ಲಿರುವ ಸ್ಟಾರ್‌ ಮಾರ್ಕ್‌ (star mark) ಇದ್ದರೆ ನಕಲಿ ನೋಟಾಗಿರುತ್ತದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಆರ್‌ಬಿಐ ಈ ಸ್ಪಷ್ಟೀಕರಣ ನೀಡಿದೆ.

ಹಾಗಾದರೆ ಈ ಸ್ಟಾರ್‌ ಮಾರ್ಕ್‌ (*) ಏನನ್ನು ಸೂಚಿಸುತ್ತದೆ? ಆರ್‌ಬಿಐ ನೀಡಿದ ಸ್ಪಷ್ಟನೆಯ ಪ್ರಕಾರ ಈ ಸ್ಟಾರ್‌ ಮಾರ್ಕ್‌ ನೋಟಿನ ಒಂದು ಐಡೆಂಟಿಫಿಕೇಶನ್.‌ ಇದು ಬದಲಿಸಿದ ಅಥವಾ ಮರು ಮುದ್ರಣವಾಗಿರುವ ನೋಟು ಎಂಬುದನ್ನು ಬಿಂಬಿಸುತ್ತದೆಯೇ ಹೊರತು ನಕಲಿ ನೋಟಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಟಾರ್‌ ಮಾರ್ಕ್‌ ಇರುವ ನೋಟುಗಳ ಮಾನ್ಯತೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೋಸ್ಟ್‌ಗಳು ಹರಿದಾಡಿತ್ತು. ಆರ್‌ಬಿಐ ಈ ಸಂಬಂಧ ಟ್ವೀಟ್‌ ಮಾಡಿದೆ. ಜುಲೈ 27ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಎಲ್ಲ ಗೊಂದಲಗಳನ್ನು ಬಗೆಹರಿಸಿದೆ.

2016ರಲ್ಲಿ ಮೊದಲ ಬಾರಿಗೆ ಸ್ಟಾರ್‌ ಬ್ಯಾಂಕ್‌ ನೋಟ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು 500 ರೂ. ಮುಖಬೆಲೆಯ ನೋಟಾಗಿತ್ತು. ಸೀರಿಯಲ್‌ ನಂಬರ್‌ ಇರುವ ಪ್ಯಾಕೇಟ್‌ ಬ್ಯಾಂಕ್‌ ನೋಟುಗಳಲ್ಲಿ ನ್ಯೂನತೆ ಇರುವ ನೋಟನ್ನು ಬದಲಿಸಿದಾಗ ಸ್ಟಾರ್‌ ಮಾರ್ಕ್‌ ಅನ್ನು ಹಾಕಲಾಗುತ್ತಿದೆ ಎಂದು ಆರ್‌ಬಿಐ ವಿವರಿಸಿದೆ.

ಭಾರತದಲ್ಲಿ ಆರ್‌ಬಿಐ 2, 5, 10, 20, 50, 100, 500 ಮತ್ತು 2000 ರೂ. ಮುಖಬೆಲೆಯ ನೋಟನ್ನು ಬಿಡುಗಡೆ ಮಾಡುತ್ತದೆ. 1 ರೂ. ನೋಟಿಗೂ ಕಾನೂನು ಮಾನ್ಯತೆ ಇದೆ. 2016ರ ನವೆಂಬರ್‌ 8 ತನಕ ಬಿಡುಗಡೆಯಾದ ಮಹಾತ್ಮಾಗಾಂಧಿ ಸೀರೀಸ್‌ನ 500 ರೂ. ಹಾಗೂ 1000 ರೂ. ನೋಟಿನ ಮಾನ್ಯತೆಯನ್ನು ಅಂದು ಅಮಾನ್ಯ ಮಾಡಲಾಗಿತ್ತು.

ಇದನ್ನೂ ಓದಿ: PM Narendra Modi: ನನ್ನ 3ನೇ ಅವಧಿಯಲ್ಲಿ ಭಾರತ ಜಗತ್ತಿನ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ! ಇದು ಮೋದಿ ‘ಗ್ಯಾರಂಟಿ’

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve bank of India) 2000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ, 2023ರ ಮೇ 23ರಿಂದ 80,000 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ 2,00 ರೂ. ನೋಟುಗಳು ಬ್ಯಾಂಕ್‌ಗಳಲ್ಲಿ ವಿನಿಮಯವಾಗಿದೆ. (Rs 2,000 notes withdrawal) ಮುಂದಿನ ನಾಲ್ಕು ತಿಂಗಳಿನಲ್ಲಿ ಎಲ್ಲ 3.6 ಕೋಟಿ ರೂ. ಮೌಲ್ಯದ 2,000 ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂದಂತಾಗುವ ನಿರೀಕ್ಷೆ ಇದೆ. 2016ರಲ್ಲೂ ಬ್ಯಾಂಕ್‌ಗಳಲ್ಲಿ ನಗದು ಹೆಚ್ಚಳವಾದಾಗ ಡೆಪಾಸಿಟ್‌ ಬಡ್ಡಿ ದರಗಳು ಇಳಿಕೆಯಾಗಿತ್ತು.

ಆರ್‌ಬಿಐ ಪ್ರಕಾರ ಚಲಾವಣೆಯಲ್ಲಿರುವ ಕರೆನ್ಸಿಗಳ ಮೌಲ್ಯದಲ್ಲಿ (currency in circulation) ಮೇ 26ರ ವೇಳೆಗೆ 36,492 ಕೋಟಿ ರೂ. ಇಳಿಕೆಯಾಗಿದ್ದು, 34.41 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ತಗ್ಗಲಿದೆ. ಚಲಾವಣೆಯಲ್ಲಿರುವ ನೋಟುಗಳೆಂದರೆ ಸಾರ್ವಜನಿಕರ ಕೈಯಲ್ಲಿ ಬಳಕೆಯಲ್ಲಿರುವ ನೋಟುಗಳು.

Exit mobile version