ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಬಂಗಾರ, ಬೆಳ್ಳಿ ಮತ್ತು ಪ್ಲಾಟಿನಮ್ ದರದಲ್ಲಿ (Gold price) ಯಥಾಸ್ಥಿತಿ ಕಂಡು ಬಂದಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಬಂಗಾರದ ದರ ಪ್ರತಿ ಹತ್ತು ಗ್ರಾಮ್ಗೆ 54,410 ರೂ.ಗಳಿತ್ತು. 22 ಕ್ಯಾರಟ್ ಚಿನ್ನದ ದರ ಪ್ರತಿ ಹತ್ತು ಗ್ರಾಮ್ಗೆ 49,900 ರೂ. ಇತ್ತು.
ಪ್ಲಾಟಿನಮ್ ದರ ಪ್ರತಿ ಹತ್ತು ಗ್ರಾಮ್ಗೆ 27,220 ರೂ.ನಷ್ಟಿತ್ತು. ಬೆಳ್ಳಿಯ ದರ ಪ್ರತಿ ಕೆಜಿಗೆ 74,000 ರೂ. ಆಗಿತ್ತು. ಡಿಸೆಂಬರ್ 16ರಂದು ಪ್ರತಿ ಕೆಜಿ ಬೆಳ್ಳಿಯ ದರ 72,500 ರೂ. ಇತ್ತು. ಡಿಸೆಂಬರ್ 25 ವೇಳೆಗೆ 74,000 ರೂ.ಗೆ ಏರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.