ನವ ದೆಹಲಿ: ಉಕ್ಕಿನ ದರದಲ್ಲಿ ಕಳೆದ 6 ತಿಂಗಳಲ್ಲಿ 40% ಇಳಿಕೆಯಾಗಿದೆ. (Steel price) ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್ನಿಗೆ 57,000 ರೂ.ಗೆ ತಗ್ಗಿದೆ.
ಕಳೆದ ಏಪ್ರಿಲ್‌ನಲ್ಲಿ ಉಕ್ಕಿನ ದರ ಪ್ರತಿ ಟನ್ನಿಗೆ 78,800 ರೂ.ಗೆ ಏರಿಕೆಯಾಗಿತ್ತು. 18% ಜಿಎಸ್‌ಟಿ ಬಳಿಕ 93,000 ರೂ.ಗೆ ಹೆಚ್ಚಳವಾಗುತ್ತಿತ್ತು.
ಉಕ್ಕಿನ ದರದಲ್ಲಿ ಉಂಟಾಗಿದ್ದ ಭಾರಿ ಏರಿಕೆಯಿಂದ ನಿರ್ಮಾಣ, ಆಟೊಮೊಬೈಲ್, ಕನ್‌ಸ್ಯೂಮರ್ ಗೂಡ್ಸ್ ವಲಯದ ಉದ್ದಿಮೆಗಳಿಗೆ ಪ್ರತಿಕೂಲ ಪರಿಣಾಮ ಬೀರಿತ್ತು. ದೇಶಿ ಮಾರುಕಟ್ಟೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಉಕ್ಕಿನ ದರ 78,800 ರೂ.ಗೆ ಏರಿತ್ತು. 18% ಜಿಎಸ್‌ಟಿ ಸೇರಿಸಿದಾಗ ಪ್ರತಿ ಟನ್ನಿಗೆ 93,000 ರೂ. ಆಗುತ್ತಿತ್ತು. ಏಪ್ರಿಲ್ ಅಂತ್ಯದ ಬಳಿಕ ಉಕ್ಕಿನ ದರ ಇಳಿಮುಖವಾಗಿದೆ. ಜೂನ್ ಅಂತ್ಯದ ವೇಳೆಗೆ 60,200 ರೂ.ಗೆ ತಗ್ಗಿತ್ತು ಎಂದು ಸ್ಟೀಲ್ ಮಿಂಟ್ ವರದಿ ತಿಳಿಸಿದೆ. ಸೆಪ್ಟೆಂಬರ್ ವೇಳೆಗೆ ಪ್ರತಿ ಟನ್ನಿಗೆ 57,000 ಟನ್ನಿಗೆ ಇಳಿಕೆಯಾಗಿತ್ತು.