Site icon Vistara News

Stock Market | ಭಾರತೀಯ ಷೇರು ಪೇಟೆಗೆ ಮರಳಿದ ವಿದೇಶಿ ಹೂಡಿಕೆದಾರರು, 31,630 ಕೋಟಿ ರೂ. ಹೂಡಿಕೆ

sensex

ಮುಂಬಯಿ: ಕಳೆದ ಅಕ್ಟೋಬರ್‌ನಲ್ಲಿ ಭಾರತೀಯ ಷೇರು ಮಾರುಕಟ್ಟೆಯಿಂದ (Stock Market) ಷೇರುಗಳನ್ನು ಗಣನೀಯವಾಗಿ ಮಾರಾಟ ಮಾಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign portfolio investors-FPI) ನವೆಂಬರ್‌ನಲ್ಲಿ ಇದುವರೆಗೆ 31,630 ಕೋಟಿ ರೂ.ಗಳ ಹೂಡಿಕೆ ಮಾಡಿದ್ದು, ಮತ್ತೆ ಮರಳಿದ್ದಾರೆ.

ಭಾರತದ ಷೇರು ಪೇಟೆ ವಿದೇಶಿ ಹೂಡಿಕೆಯನ್ನು ಮತ್ತೆ ಆಕರ್ಷಿಸುತ್ತಿರುವುದು ಇದರಿಂದ ಸಾಬೀತಾಗಿದೆ. 2022ರ ಮೊದಲಾರ್ಧದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರೆ, ದ್ವಿತೀಯಾರ್ಧದಲ್ಲಿ ಖರೀದಿಸಿದ್ದಾರೆ. ಕಳೆದ ವಾರ ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿತ್ತು.

ಕಳೆದ ಸೆಪ್ಟೆಂಬರ್‌ನಲ್ಲಿ 8 ಕೋಟಿ ರೂ. ಹಾಗೂ ಅಕ್ಟೋಬರ್‌ನಲ್ಲಿ 7,624 ಕೋಟಿ ರೂ.ಗಳ ನಿವ್ವಳ ಹೊರ ಹರಿವು ಎಫ್‌ಪಿಐ ವಿಭಾಗದಲ್ಲಿ ಕಂಡು ಬಂದಿತ್ತು. ಆಗಸ್ಟ್‌ನಲ್ಲಿ 51,200 ಕೋಟಿ ರೂ. ಮತ್ತು ಜುಲೈನಲ್ಲಿ 5,000 ಕೋಟಿ ರೂ. ಮೌಲ್ಯದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿದ್ದರು.

ಮಾಹಿತಿ ತಂತ್ರಜ್ಞಾನ, ಆಟೊಮೊಬೈಲ್‌, ಟೆಲಿಕಾಂ ವಲಯದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಹೆಚ್ಚಾಗಿ ಖರೀದಿಸುತ್ತಿದ್ದಾರೆ.

Exit mobile version