Site icon Vistara News

Stock market : ವರ್ಕ್‌ ಫ್ರಮ್‌ ಹೋಮ್‌ ಮುಗಿಯುತ್ತಿದ್ದಂತೆ, ಸ್ಟಾಕ್‌ ಮಾರ್ಕೆಟ್‌ಗೆ ಲಕ್ಷಾಂತರ ಮಂದಿ ಬೈ ಹೇಳಿದ್ದೇಕೆ?

stock invest

ಮುಂಬಯಿ: ಅನೇಕ ಕಂಪನಿಗಳು ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಜಾರಿಗೊಳಿಸಿದ್ದ ವರ್ಕ್‌ ಫ್ರಮ್‌ ಹೋಮ್‌ (work-from-home) ಪದ್ಧತಿಯನ್ನು ಇದೀಗ ಹಿಂತೆಗೆದುಕೊಳ್ಳುತ್ತಿವೆ. ಹಂತ ಹಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಈ ನಡುವೆ ಕಳೆದ 9 ತಿಂಗಳುಗಳಲ್ಲಿ 53 ಲಕ್ಷ ಮಂದಿ ಸ್ಟಾಕ್‌ ಟ್ರೇಡಿಂಗ್‌ ಅನ್ನು ಕೈಬಿಟ್ಟಿದ್ದಾರೆ. ಆದ್ದರಿಂದ ವರ್ಕ್‌ ಫ್ರಮ್‌ ಹೋಮ್‌ ಅಂತ್ಯವಾಗಿದ್ದಕ್ಕೂ, ಸ್ಟಾಕ್‌ ಮಾರ್ಕೆಟ್‌ನಲ್ಲಿ (Stock market) ಲಕ್ಷಾಂತರ ಮಂದಿ ಟ್ರೇಡಿಂಗ್‌ಗೆ ವಿದಾಯ ಹೇಳಿದ್ದಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕಳೆದ 9 ತಿಂಗಳುಗಳಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ 53 ಲಕ್ಷ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ 3.27 ಕೋಟಿಗೆ ಇಳಿಕೆಯಾಗಿದೆ. 2022ರ ಜೂನ್‌ನಲ್ಲಿ 3.8 ಕೋಟಿ ಸಕ್ರಿಯ ಹೂಡಿಕೆದಾರರಿದ್ದರು. ಈ ಇಳಿಕೆಗೆ ವರ್ಕ್‌ ಫ್ರಮ್‌ ಹೋಮ್‌ ಪದ್ಧತಿ ಅಂತ್ಯವಾಗಿರುವುದು ಕೂಡ ಕಾರಣಗಳಲ್ಲೊಂದು ಎನ್ನುತ್ತಾರೆ ತಜ್ಞರು.

ಮೊದಲನೆಯದಾಗಿ 2022-23ರಲ್ಲಿ ಷೇರು ಮಾರುಕಟ್ಟೆಗೆ ರಿಟೇಲ್‌ ಹೂಡಿಕೆಯ ಒಳ ಹರಿವು 49,200 ಕೋಟಿ ರೂ. ಇತ್ತು. ಇದು ಕಳೆದ ಮೂರು ವರ್ಷಗಳಲ್ಲಿಯೇ ಕನಿಷ್ಠ. 2021-22ರಲ್ಲಿ 1.65 ಲಕ್ಷ ಕೋಟಿ ರೂ. ಒಳ ಹರಿವು ಇತ್ತು. 2020-21ರಲ್ಲಿ 68,400 ಕೋಟಿ ರೂ. ಒಳ ಹರಿವು ಇತ್ತು ಎಂದು ಎನ್‌ಎಸ್‌ಇ ಅಂಕಿ ಅಂಶಗಳು ತಿಳಿಸಿವೆ.

ಎರಡನೆಯದಾಗಿ ರಿಟೇಲ್‌ ಹೂಡಿಕೆದಾರರ ದಿನವಹಿ ಸರಾಸರಿ ವಹಿವಾಟು 2023ರ ಮಾರ್ಚ್‌ ಅಂತ್ಯಕ್ಕೆ 29% ಇಳಿಕೆಯಾಗಿದೆ. ಹೊಸ ಡಿಮ್ಯಾಟ್‌ ಖಾತೆಗಳ ಸೇರ್ಪಡೆ ಕೂಡ ತಗ್ಗಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ನಿಫ್ಟಿಯ ಡೌನ್‌ ಟ್ರೆಂಡ್‌ ಕೂಡ ಪ್ರಭಾವ ಬೀರಿರಬಹುದು. ವರ್ಕ್‌ ಫ್ರಮ್‌ ಹೋಮ್‌ ಇದ್ದಾಗ ಯುವ ಜನತೆಗೆ ಮನೆಯಲ್ಲಿ ಇದ್ದುಕೊಂಡೇ ಸ್ಟಾಕ್‌ ಮಾರ್ಕೆಟ್‌ ವ್ಯವಹಾರಕ್ಕೂ ಹಾದಿ ಸುಗಮವಾಗಿತ್ತು. ಆದರೆ ಕಚೇರಿಗೆ ಮರಳಿದ ಬಳಿಕ ಮನೆಯಲ್ಲಿದ್ದಂತೆ ಸ್ಟಾಕ್‌ ವ್ಯವಹಾರ ಸಾಧ್ಯವಾಗುತ್ತಿಲ್ಲ.

ಮ್ಯೂಚುವಲ್‌ ಫಂಡ್‌ಗೆ ಹೂಡಿಕೆ ಹೆಚ್ಚಳ:

ಒಂದು ಕಡೆ ಸ್ಟಾಕ್‌ ಮಾರ್ಕೆಟ್‌ಗೆ ಹೂಡಿಕೆ ಕಡಿಮೆಯಾಗಿದ್ದರೂ, ಮ್ಯೂಚುವಲ್‌ ಫಂಡ್‌ಗಳಿಗೆ (mutualfund) ಹೂಡಿಕೆಯ ಹರಿವು ಹೆಚ್ಚಳವಾಗಿದೆ. ಕಳೆದ ಮಾರ್ಚ್‌ನಲ್ಲಿ 14,300 ಕೋಟಿ ರೂ.ಗಳು ಎಸ್‌ಐಪಿ ಮೂಲಕ ಲಭಿಸಿತ್ತು.

Exit mobile version