ನವ ದೆಹಲಿ: ಪತಂಜಲಿ ಸಮೂಹದ ಕನಿಷ್ಠ 4 ಕಂಪನಿಗಳು ಮುಂದಿನ 5 ವರ್ಷಗಳಲ್ಲಿ ಷೇರು ಪೇಟೆಯನ್ನು ಪ್ರವೇಶಿಸಲಿವೆ ( Patanjali) ಎಂದು ಯೋಗಗುರು ಬಾಬಾ ರಾಮ್‌ದೇವ್ ತಿಳಿಸಿದ್ದಾರೆ.
ಪತಂಜಲಿ ಆಯುರ್ವೇದ, ಪತಂಜಲಿ ಮೆಡಿಸಿನ್, ಪತಂಜಲಿ ವೆಲ್‌ನೆಸ್ ಮತ್ತು ಪತಂಜಲಿ ಲೈಫ್‌ಸ್ಟೈಲ್ ಮುಂದಿನ ಐದು ವರ್ಷಗಳಲ್ಲಿ ಆರಂಭಿಕ ಷೇರು ಬಿಡುಗಡೆ (ಐಪಿಒ) ನಡೆಸಲಿವೆ ಎಂದು ಬಾಬಾ ರಾಮ್ ದೇವ್ ತಿಳಿಸಿದ್ದಾರೆ.
ಪತಂಜಲಿ ಸಮೂಹದ ಮಾರುಕಟ್ಟೆ ಬಂಡವಾಳ ಮುಂದಿನ ಐದು ವರ್ಷಗಳಲ್ಲಿ 50,000 ಕೋಟಿ ರೂ.ಗಳಿಂದ 5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಾಬಾ ರಾಮ್‌ದೇವ್ ಅವರ ಈ ಘೋಷಣೆಯ ಬಳಿಕ ಪತಂಜಲಿ ಫುಡ್ಸ್ ಷೇರು ದರ ಏರಿಕೆಯಾಯಿತು. ಪತಂಜಲಿ ಸಮೂಹದ ವಹಿವಾಟು ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದರು.