ನವದೆಹಲಿ: ಅಸ್ಥಿರತೆಯಿಂದ ಹೊರ ಬಂದಿರುವ ಭಾರತೀಯ ಷೇರು ಪೇಟೆಯು (Stock Market) ಬುಧವಾರ ಏರುಗತಿಯಲ್ಲಿ ಸಾಗಲಿದೆ. ಸೆನ್ಸೆಕ್ಸ್ (Sensex) ಬುಧವಾರ 612 ಪಾಯಿಂಟ್ ಏರಿಕೆ ಕಂಡು, 71,752 ರಲ್ಲಿ ಅಂತ್ಯವಾಗಿದೆ. ನಿಫ್ಟಿ (Nifty) ಕೂಡ 27,700 ಅಂಕ ದಾಟಿದೆ. ವಿಶೇಷವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಷೇರುಗಳು ಹೆಚ್ಚು ಕಾಣಿಕೆಯನ್ನು ನೀಡಿವೆ.
ಕೇಂದ್ರ ಮಧ್ಯಂತರ ಬಜೆಟ್ ಹಾಗೂ ಅಮೆರಿಕದ ಫೆಡರಲ್ ಬಡ್ಡಿ ದರ ನಿರ್ಧಾರಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಹೆಚ್ಚಿನ ವಿಶ್ವಾಸ ತೋರಿಸಿದ್ದಾರೆ. ಹಾಗಾಗಿ, ಭಾರತೀಯ ಷೇರು ಪೇಟೆಯ ಏರಿಕೆಯನ್ನು ಕಂಡಿದೆ.
ವಹಿವಾಟು ಆರಂಭದಲ್ಲಿ ನೆಲಕಚ್ಚಿದರೂ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 612.21 ಪಾಯಿಂಟ್ ಅಥವಾ 0.86 ಶೇಕಡಾ ಜಿಗಿದು 71,752.11 ಕ್ಕೆ ಸ್ಥಿರವಾಯಿತು. ದಿನದ ಸಮಯದಲ್ಲಿ, ಇದು 711.49 ಅಂಕಗಳನ್ನು ಅಥವಾ 1 ಶೇಕಡಾವನ್ನು 71,851.39 ಗೆ ದಾಟಿತು. ನಿಫ್ಟಿ ಕೂಡ 203.60 ಅಂಕ ಏರಿಕೆ ಕಂಡಿತು.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಸನ್ ಫಾರ್ಮಾ, ಟಾಟಾ ಮೋಟಾರ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ, ಬಜಾಜ್ ಫಿನ್‌ಸರ್ವ್, ಪವರ್ ಗ್ರಿಡ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಪ್ರಮುಖ ಲಾಭ ಗಳಿಸಿದವು. ಇದೇ ವೇಳೆ, ಲಾರ್ಸೆನ್ ಆ್ಯಂಡ್ ಟುಬ್ರೊ ಶೇ.4ರಷ್ಟು ಕುಸಿತವನ್ನು ದಾಖಲಿಸಿದರೆ, ಟೈಟನ್ ಕೂಡ ಇಳಿಕೆ ಮಾಡಿದೆ.
ಇದೇ ವೇಳೆ, ಟೋಕಿಯೋ, ಶಾಂಘೈ, ಹಾಂಕಾಂಗ್ ಷೇರು ಪೇಟೆಗಳು ಕುಸಿತವನ್ನು ದಾಖಲಿಸಿದರೆ, ಸೋಲ್ ಮಾತ್ರ ಏರಿಕೆ ಕಂಡಿದೆ. ಯುರೋಪಿಯನ್ ಮಾರುಕಟ್ಟೆಗಳು ಮಿಶ್ರ ಫಲ ಅನುಭವಿಸಿವೆ. ಹಾಗೆಯೇ, ಅಮೆರಿಕ ಮಾರುಕಟ್ಟೆಗಳು ಕೂಡ ಮಂಗಳವಾರ ಏರಿಕೆಯನ್ನು ದಾಖಲಿಸಲಿಲ್ಲ.
ಈ ಸುದ್ದಿಯನ್ನೂ ಓದಿ: Stock Market: ದಾಖಲೆ ಬರೆದ ಷೇರು ಪೇಟೆ, 72,098 ಅಂಕ ತಲುಪಿದ ಸೆನ್ಸೆಕ್ಸ್!