Site icon Vistara News

Sensex | ಸಾರ್ವಕಾಲಿಕ ಏರಿಕೆಯ ಸನಿಹಕ್ಕೆ ಷೇರು ಪೇಟೆ, ಸೆನ್ಸೆಕ್ಸ್‌ 61,185ಕ್ಕೆ ಏರಿಕೆ, ನಿಫ್ಟಿ 18,202ಕ್ಕೆ ಸ್ಥಿರ

Stock Market goes up and Sensex jumps by 612 points

ಮುಂಬಯಿ: ವಿದೇಶಿ ಹೂಡಿಕೆದಾರರ ಸತತ ಹೂಡಿಕೆ ಹಾಗೂ ಸಾರ್ವಜನಿಕ ವಲಯದ ಬ್ಯಾಂಕಗಳ ಬೆಂಬಲದಿಂದ ಮಾರುಕಟ್ಟೆ ಇಂದು (Sensex) ಉತ್ತಮ ವಹಿವಾಟು ನಡೆಸಿತು.
ನಿಫ್ಟಿ ಇಂದು 94 ಅಂಕಗಳ ಏರಿಕೆಯೊಂದಿಗೆ 18221 ರಲ್ಲಿ ಮತ್ತು ಸೆನ್ಸೆಕ್ಸ್ 238 ಅಂಶಗಳ ಹೆಚ್ಚಳದೊಂದಿಗೆ 61188 ರಲ್ಲಿ ಪ್ರಾರಂಭವಾಯಿತು. ಬ್ಯಾಂಕ್ ನಿಫ್ಟಿ ಸಹ 482 ಅಂಕಗಳ ಏರಿಕೆಯೊಂದಿಗೆ 41740 ರಲ್ಲಿ ಆರಂಭವಾಯಿತು.
ನಿಫ್ಟಿ ಆರಂಭವಾದ ನಂತರ ಸತತವಾಗಿ ಇಳಿಕೆ ಕಂಡು 18060 ರವರೆಗೆ ಕುಸಿಯಿತು. ಮಧ್ಯಾಹ್ನ 1.30 ಕ್ಕೆ ಯುರೋಪ್ ಮಾರುಕಟ್ಟೆ ಪ್ರಾರಂಭದ ನಂತರ ಏರಿಕೆಯ ಹಾದಿ ಹಿಡಿದ ನಿಫ್ಟಿ 85 ಅಂಕಗಳ ಏರಿಕೆಯೊಂದಿಗೆ 18202 ರಲ್ಲಿ ಮುಕ್ತಾಯಕಂಡಿತು. ಬ್ಯಾಂಕ್ ನಿಫ್ಟಿ ಬೆಳಿಗ್ಗೆ ಸಾರ್ವಕಾಲಿಕ ಏರಿಕೆಯ ಸಮೀಪ ಪ್ರಾರಂಭವಾದಾಗ ಹೂಡಿಕೆದಾರರು ಲಾಭ ನಗಧೀಕರಣಕ್ಕೆ ಮುಂದಾಗಿದ್ದರಿಂದ ಇಳಿಕೆಯಾಯಿತು. ಪುನಃ ಮಧ್ಯಾಹ್ನ ಸೂಚ್ಯಂಕ ಏರಿಕೆ ಕಂಡು 428 ಅಂಶಗಳ ಹೆಚ್ಚಳದೊಂದಿಗೆ ವಹಿವಾಟು ಪೂರ್ಣಗೊಳಿಸಿತು. ಸೆನ್ಸೆಕ್ಸ್ 234 ಅಂಕಗಳ ಏರಿಕೆಯೊಂದಿಗೆ 61185 ರಲ್ಲಿ ಅಂತ್ಯಗೊಂಡಿತು
ಬ್ಯಾಂಕ್ ನಿಫ್ಟಿ ಸಾರ್ವಕಾಲಿಕ ಏರಿಕೆ ಮಟ್ಟದಿಂದ ಕೇವಲ 150 ಅಂಕಗಳ ದೂರದಲ್ಲಿದೆ ಮತ್ತು ನಿಫ್ಟಿ ಸಹ ಸಾರ್ವಕಾಲಿಕ ಏರಿಕೆ ಹತ್ತಿರದಲ್ಲಿದೆ. ಇಂದು ಸಾರ್ವಜನಿಕ ಬ್ಯಾಂಕಗಳು ಉತ್ತಮ ವಹಿವಾಟು ನಡೆಸಿ ಷೇರುಪೇಟೆಗೆ ಉತ್ತಮ ಸ್ಪಂಧನೆ ನೀಡಿದವು.
ಸಣ್ಣ ಕಂಪನಿಗಳ ಸೂಚ್ಯಂಕ ಶೇ. 0.83 ರಷ್ಟು ಏರಿಕೆಯಾದರೆ ಮಧ್ಯಮ ಕಂಪನಿಗಳ ಸೂಚ್ಯಂಕ 0.89 ರಷ್ಟು ಏರಿಕೆಯಾಯಿತು.
ಬ್ಯಾಂಕಿಂಗ್, ಆಟೋ, ಲೋಹ ಮತ್ತು ರಿಯಾಲಿಟಿ ವಲಯದ ಸೂಚ್ಯಂಕಗಳು ಏರಿಕೆ ಕಂಡರೆ ಫಾರ್ಮಾ ಸೂಚ್ಯಂಕ ಇಳಿಕೆ ದಾಖಲಿಸಿತು.
ಇಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1948 ಕೋಟಿ ರೂ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು 844 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Exit mobile version