Site icon Vistara News

Invest Karnataka 2022 | ರಾಜ್ಯದಲ್ಲಿ ಅದಾನಿ ಸಮೂಹದಿಂದ 7 ವರ್ಷಗಳಲ್ಲಿ1 ಲಕ್ಷ ಕೋಟಿ ರೂ. ಹೂಡಿಕೆ

karan adani

ಬೆಂಗಳೂರು: ಕರ್ನಾಟಕದಲ್ಲಿ ಅದಾನಿ ಸಮೂಹದ ಉದ್ದಿಮೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ವ್ಯಾಪಕವಾಗಿ ವಿಸ್ತರಣೆಯಾಗಲಿದೆ. ಸಮೂಹವು ರಾಜ್ಯದಲ್ಲಿ ಮುಂದಿನ 7 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ (Invest Karnataka 2022 ) ಎಂದು ಗೌತಮ್‌ ಅದಾನಿಯವರ ಪುತ್ರ, ಅದಾನಿ ಪೋರ್ಟ್ಸ್‌ನ ಸಿಇಒ ಕರಣ್‌ ಅದಾನಿ ತಿಳಿಸಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮುಂದಿನ ಏಳು ವರ್ಷಗಳಲ್ಲಿ ನಾನಾ ವಲಯಗಳಲ್ಲಿ ಅದಾನಿ ಗ್ರೂಪ್‌ ಹೂಡಿಕೆ ಮಾಡಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯುತ್‌ ಉತ್ಪಾದನೆಯನ್ನು ಅದಾನಿ ಸಮೂಹ ಮಾಡುತ್ತಿದೆ. ಮಂಗಳೂರು ಏರ್‌ ಪೋರ್ಟ್‌ ಅಭಿವೃದ್ಧಿಯಾಗಿದೆ. ರಾಜ್ಯದ ಮೂಲ ಸೌಕರ್ಯ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಅದಾನಿ ಸಮೂಹ ಭಾರಿ ಹೂಡಿಕೆ ಮಾಡಲಿದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಅದಾನಿ ಸಮೂಹ 20,000 ಕೋಟಿ ರೂ. ಹೂಡಿಕೆ ಮಾಡಿದೆ. ಸಿಮೆಂಟ್‌, ವಿದ್ಯುತ್‌, ನಗರಗಳಲ್ಲಿ ಅನಿಲ ಪೈಪ್‌, ಖಾದ್ಯ ತೈಲ, ಸಾರಿಗೆ, ಲಾಜಿಸ್ಟಿಕ್ಸ್‌, ಡಿಜಿಟಲ್‌ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲಿದೆ ಎಂದರು.

Exit mobile version