Site icon Vistara News

Swiss watch : ಭಾರತೀಯರ ಸ್ವಿಸ್‌ ವಾಚ್‌ ವ್ಯಾಮೋಹ, 2022ರಲ್ಲಿ ಖರೀದಿಸಿದ್ದೆಷ್ಟು?

swiss wach

#image_title

ನವ ದೆಹಲಿ: ಭಾರತೀಯರಿಗೆ ಸ್ವಿಸ್‌ ವಾಚ್‌ಗಳೆಂದರೆ (Swiss watch) ಬಲು ಇಷ್ಟ. ಇದರ ಲಾಭವನ್ನು ಸ್ವಿಸ್‌ ವಾಚ್‌ ಉತ್ಪಾದಕರು ಕಂಡುಕೊಂಡಿದ್ದಾರೆ. ಕಳೆದ 2022ರಲ್ಲಿ ಭಾರತಕ್ಕೆ ದಾಖಲೆಯ 1,723 ಕೋಟಿ ರೂ. ಮೌಲ್ಯದ ಸ್ವಿಸ್‌ ವಾಚುಗಳು ರಫ್ತಾಗಿವೆ ಎಂದು ಫೆಡರೇಷನ್‌ ಆಫ್‌ ದಿ ಸ್ವಿಸ್‌ ವಾಚ್‌ ಇಂಡಸ್ಟ್ರಿಯ ಇತ್ತೀಚಿನ ವರದಿ ತಿಳಿಸಿದೆ.

2021ರಲ್ಲಿ 1,438 ಕೋಟಿ ರೂ. ಬೆಲೆ ಬಾಳುವ ಸ್ವಿಸ್‌ ವಾಚುಗಳನ್ನು ಭಾರತೀಯರು ತರಿಸಿಕೊಂಡಿದ್ದರು. ಸ್ವಿಸ್‌ ವಾಚುಗಳ ರಫ್ತು ಪಟ್ಟಿಯಲ್ಲಿ ಭಾರತ 23ನೇ ಸ್ಥಾನದಲ್ಲಿದೆ. ಕೋವಿಡ್‌ ಬಿಕ್ಕಟ್ಟಿನ ವೇಳೆ ರಫ್ತು ಇಳಿದಿತ್ತು. ಇದೀಗ ಮತ್ತೆ ಚೇತರಿಸಿದೆ.

ಭಾರತದಲ್ಲಿ ಲಕ್ಸುರಿ ವಾಚ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. 2020-2022ರ ಅವಧಿಯಲ್ಲಿ ಸ್ವಿಸ್‌ ವಾಚ್‌ಗಳ ಆಮದು ಇಮ್ಮಡಿಯಾಗಿದೆ. ರೊಲೆಕ್ಸ್‌ ವಾಚಸ್‌, (Rolex watches), ಪಟೇಕ್‌ ಪಿಲಿಪ್‌, ಬಿಎಎಲ್‌ಎಲ್‌, ಬ್ಯಾಂಫೋರ್ಡ್‌ ವಾಚಸ್‌, ಬೆಲ್&ರೋಸ್‌, ಬೊವೆಟ್‌ ವಾಚಸ್‌, ಬ್ರೆಟ್ಲಿಂಗ್‌ ಮೊದಲಾದ ಸ್ವಿಸ್‌ ವಾಚ್‌ ಬ್ರಾಂಡ್‌ಗಳಿಗೆ ಭಾರತದಲ್ಲಿ ಬೇಡಿಕೆ ಇದೆ. 60-80 ಸಾವಿರ ರೂ.ಗಳಿಂದ ಲಕ್ಷಾಂತರ ರೂ. ಬೆಲೆ ಬಾಳುವ ಸ್ವಿಸ್‌ ವಾಚ್‌ಗಳು ಭಾರತದಲ್ಲಿ ಮಾರಾಟವಾಗುತ್ತಿವೆ.

ಮುಕೇಶ್‌ ಅಂಬಾನಿಯವರ ಮಗ ಅನಂತ್‌ ಅಂಬಾನಿ ಅವರಿಗೆ ಸ್ವಿಸ್‌ ಲಕ್ಸುರಿ ವಾಚ್‌ಗಳೆಂದರೆ ಬಲು ಇಷ್ಟ. ರೊಲೆಕ್ಸ್‌ ಸೇರಿದಂತೆ ಸ್ವಿಸ್‌ ಮೂಲದ ಪ್ರಮುಖ ಐಷಾರಾಮಿ ವಾಚ್‌ ಬ್ರಾಂಡ್‌ಗಳ ವಾಚ್‌ಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ.

Exit mobile version