ನವ ದೆಹಲಿ: ಆಮದನ್ನು ಹತ್ತಿಕ್ಕಲು ಹಾಗೂ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಲಿರುವ 2022-23ರ ಬಜೆಟ್‌ನಲ್ಲಿ 35 ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಸುವ (Customs duty ) ಸಾಧ್ಯತೆ ಇದೆ. ಇದರಲ್ಲಿ ಚಿನ್ನಾಭರಣ, ಖಾಸಗಿ ಜೆಟ್, ಹೆಲಿಕಾಪ್ಟರ್‌ಗಳು, ಹೈ ಎಂಡ್ ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ವಿಟಮಿನ್‌ಗಳು ಇರಬಹುದು ಎಂದು ಮೂಲಗಳು ತಿಳಿಸಿವೆ.
ಸಚಿವಾಲಯಗಳು ನೀಡುವ ಶಿಫಾರಸುಗಳನ್ನು ಆಧರಿಸಿ 35 ವಸ್ತುಗಳ ಆಮದು ಸುಂಕವನ್ನು ಏರಿಸುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ ಜಿಡಿಪಿಯ 4.4%ಕ್ಕೆ ವೃದ್ಧಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಆಮದನ್ನು ನಿಯಂತ್ರಿಸಿ, ರಫ್ತನ್ನು ಹೆಚ್ಚಿಸಲು ಈ ಉಪಕ್ರಮ ಕೈಗೊಂಡಿದೆ. ಅನಗತ್ಯ ವಸ್ತುಗಳ ಆಮದನ್ನು ತಗ್ಗಿಸುವುದು ಕೂಡ ಇದರ ಉದ್ದೇಶವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
2023-24ರಲ್ಲಿ ಜಾಗತಿಕ ಆರ್ಥಿಕತೆಯ ಮಂದಗತಿಯ ಪರಿಣಾಮ ರಫ್ತಿನ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್‌ನಲ್ಲಿ ಹಣಕಾಸು ಸಚಿವಾಲಯವು ಇತರ ಸಚಿವಾಲಯಗಳಿಗೆ ಅನಗತ್ಯವಲ್ಲದ ಆಮದನ್ನು ನಿರುತ್ತೇಜನಗೊಳಿಸಲು ವಸ್ತುಗಳನ್ನು ಸೂಚಿಸುವಂತೆ ತಿಳಿಸಿತ್ತು.